One Tap News - Kannada News Daily

Header
collapse
...
Home / Kodagu / ಅಂತಾರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ರಾಜ್ಯ ಪ್ರಶಸ್ತಿಗೆ ಕೊಡಗಿನ ಇಬ್ಬರು ಶಿಕ್ಷಕರು ಆಯ್ಕೆ.

ಅಂತಾರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ರಾಜ್ಯ ಪ್ರಶಸ್ತಿಗೆ ಕೊಡಗಿನ ಇಬ್ಬರು ಶಿಕ್ಷಕರು ಆಯ್ಕೆ.

2025-10-25  Kodagu Desk  5 views
ಅಂತಾರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ರಾಜ್ಯ ಪ್ರಶಸ್ತಿಗೆ ಕೊಡಗಿನ ಇಬ್ಬರು ಶಿಕ್ಷಕರು ಆಯ್ಕೆ.

 

 ಕೊಡಗು. 

ಅಂತರರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಅಂಗವಾಗಿ ನೀಡುವ ರಾಜ್ಯ ಪ್ರಶಸ್ತಿಗೆ ಕೊಡಗಿನ ಸಂಗನ ಗೌಡ ಪಾಟೀಲ್ ಮತ್ತು ಪ್ರಭು  ಕುಮಾರ್ ಆಯ್ಕೆಯಾಗಿದ್ದಾರೆ 

ಅಂತರಾಷ್ಟೀಯ ಶಿಕ್ಷಕರ ದಿನಾಚರಣೆಯ ಅಂಗವಾಗಿ  ಕರ್ನಾಟಕ ರಾಜ್ಯ ಅನುದಾನಿತ, ಅನುಧಾನರಹಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದಿಂದ ಬೆಂಗಳೂರಿನ  ಸರ್ಕಾರಿ ಕಲಾ ಕಾಲೇಜಿನಲ್ಲಿ  ಅಕ್ಟೋಬರ್ 26ರಂದು ನಡೆಯಲಿರುವ ರಾಜ್ಯದ  ಉತ್ತಮ ಶಿಕ್ಷಕ/ಶಿಕ್ಷಕಿ ರತ್ನ  ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಾಳೆಲೆ ವಿಜಯಲಕ್ಷ್ಮಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಪಡಿಞರಂಡ ಪ್ರಭು ಕುಮಾರ್ ಕ್ರೀಡಾ ಕ್ಷೇತ್ರದ  ಹಾಕಿ, ಬ್ಯಾಸ್ಕೆಟ್ಬಾಲ್, ವಾಲಿಬಾಲ್ ಕ್ರೀಡೆಗಳಲ್ಲಿ ಕಳೆದ ಇಪ್ಪತ್ತು  ಶೈಕ್ಷಣಿಕ ವರ್ಷಗಳಲ್ಲಿ ಇವರಿಂದ ತರಬೇತಿ ಪಡೆದ   ಬಾಲಕ ಬಾಲಕಿಯರು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದರಲ್ಲದೆ ಇವರಿಂದ ಪ್ರಾಥಮಿಕ ಹಂತದ ತರಬೇತಿಪಡೆದ ಹಾಕಿ ಆಟಗಾರರುಗಳಾದ ಸಣ್ಣುವಂಡ ಉತ್ತಪ್ಪ ಮತ್ತು ವಿ‌.ಅರ್.ರಘುನಾಥ್ ಒಲಿಂಪಿಕ್ಸ್ ನಲ್ಲೂ ಭಾಗವಹಿಸಿರುವುದನ್ನು ಪರಿಗಣಿಸುವ ಮೂಲಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಗೊಣಿಕೊಪ್ಪಲು ಕಾಪ್ಸ್ ಶಾಲೆಯ ಚಿತ್ರ ಕಲಾ ಶಿಕ್ಷಕರಾದ ಸಂಗನ ಗೌಡ ಪಾಟೀಲ್ ಕಳೆದ ಮುವತ್ತು ವರ್ಷಗಳ ವೃತ್ತಿ ಜೀವನದಲ್ಲಿ ಇವರಿಂದ ಚಿತ್ರ ಕಲಾ ತರಬೇತಿ ಪಡೆದ ವಿದ್ಯಾರ್ಥಿಗಳು  ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡಿರುತ್ತಾರಲ್ಲದೆ ಇವರ ಗರಡಿಯಲ್ಲಿ ಬೆಳೆದ ಬಾಗಲಕೋಟೆ ಜಿಲ್ಲೆಯ ಲಿಂಗಪ್ಪ ಅಂಗಡಿ, ಬೆಂಗಳೂರಿನ ಪ್ರಜ್ವಲ್ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಇಬ್ಬರು ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


Share: