One Tap News - Kannada News Daily

Header
collapse
...
Home / Kodagu / ಜೆಆರ್ ಎಫ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಗೆ ಅರ್ಹತೆ ಪಡೆದ ಕೊಡಗಿನ ಕುವರಿ ಆದ್ಯ ವಿ. ಪಿ

ಜೆಆರ್ ಎಫ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಗೆ ಅರ್ಹತೆ ಪಡೆದ ಕೊಡಗಿನ ಕುವರಿ ಆದ್ಯ ವಿ. ಪಿ

2026-02-05  Kodagu Desk  948 views
ಜೆಆರ್ ಎಫ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಗೆ ಅರ್ಹತೆ ಪಡೆದ ಕೊಡಗಿನ ಕುವರಿ ಆದ್ಯ ವಿ. ಪಿ

✍️ಲೋಹಿತ್ ಗೌಡ  ವಿ. ಪಿ

ಗೋಣಿಕೊಪ್ಪ.
ಗುಜರಾತಿನ ನ್ಯಾಷನಲ್ ಫಾರೆನ್ಸಿಕ್ಸ್ ಸೈನ್ಸ್ ಆಫ್ ಇನ್ಸ್ಟಿಟ್ಯೂಟ್ - (NFSU) ನಲ್ಲಿ ವ್ಯಾಸಂಗ ಮಾಡುತ್ತಿರುವ ಕೊಡಗಿನ ಕೂಟ್ಟಗೇರಿ ಗ್ರಾಮದ ಆದ್ಯ ವಿ. ಪಿರವರು ಜೆಆರ್ ಎಫ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಆಯ್ಕೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಜೂನಿಯರ್ ರಿಸರ್ಚ್ ಫೆಲೋಶಿಪ್ ಗೆ ಅರ್ಹತೆ ಪಡೆದಕೊಂಡಿದ್ದಾರೆ.

ದೇಶದಾದ್ಯಂತ 7 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದು ಅದರಲ್ಲಿ 5,000 ವಿದ್ಯಾರ್ಥಿಗಳಷ್ಟೆ ಆಯ್ಕೆಯಾಗಲಿದ್ದು ಇದರಲ್ಲಿ ನಮ್ಮ ಕೊಡಗಿನ ವಿದ್ಯಾಥಿ೯ನಿ ಆದ್ಯ ವಿ. ಪಿ ರವರು 99.4166% ಅಂಕ ಪಡೆದು ಆಯ್ಕೆಯಾಗಿದ್ದಾರೆ,  ಕೊಡಗಿನಿಂದ ತೇರ್ಗಡೆಯಾದ  ಏಕೈಕ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ ಆದ್ಯರವರಿಗೆ ಸಲ್ಲುತ್ತದೆ.

JRF (ಜೂನಿಯರ್ ರಿಸರ್ಚ್ ಫೆಲೋಶಿಪ್) ಪರೀಕ್ಷೆ ಒಂದು ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದ್ದು, ಶೈಕ್ಷಣಿಕ ಹಾಗೂ ಸಂಶೋಧನಾ ಸಾಮರ್ಥ್ಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವುದಕ್ಕಾಗಿ ನಡೆಸಲಾಗುತ್ತದೆ. JRF ಅರ್ಹತೆ ಪಡೆಯುವುದರಿಂದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಆರ್ಥಿಕ ಬೆಂಬಲದೊಂದಿಗೆ ಸಂಶೋಧನೆ ಅಥವಾ ಪಿಎಚ್‌ಡಿ ಮಾಡಲು ಅವಕಾಶ ದೊರೆಯುತ್ತದೆ.

1002119192.jpg

ಭಾರತದಲ್ಲಿ ಸಂಶೋಧನೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರತಿಷ್ಠಿತ ಫೆಲೋಶಿಪ್ ಆಗಿದೆ. ಇದು UGC NET ಅಥವಾ CSIR NET ಪರೀಕ್ಷೆಗಳ ಮೂಲಕ ಆಯ್ಕೆಯಾದವರಿಗೆ, ಪಿಎಚ್‌ಡಿ (Ph.D.) ಅಧ್ಯಯನಕ್ಕಾಗಿ ಮಾಸಿಕ ಸ್ಟೈಫಂಡ್ ಮತ್ತು ಸಂಶೋಧನಾ ಸೌಲಭ್ಯಗಳನ್ನು 5 ವರ್ಷಗಳವರೆಗೆ ಒದಗಿಸುತ್ತದೆ.

ಪೊನ್ನಂಪೇಟೆ ತಾಲೋಕಿನ ಕೊಟ್ಟಗೇರಿ ಗ್ರಾಮದ ಶ್ರೀ ವಿ. ಎಸ್ ಪ್ರಸನ್ನ ಮತ್ತು ಹಾತೂರಿನ ಶ್ರೀಮತಿ ವಿ. ಪಿ ಜ್ಯೋತಿ ಪ್ರಸನ್ನ ರವರ ದಂಪತಿಯ ಮಗಳ ಈ ಸಾಧನೆ ಕುಟುಂಬ ವರ್ಗಕ್ಕೆ ಸಂತೋಷ ನೀಡಿದೆ. ಮಗಳ ಈ ಸಾಧನೆ ಹೆಮ್ಮೆ ಎನ್ನಿಸುತ್ತಿದೆ ಎಂದು ಕುಟುಂಬ ವರ್ಗ ಸಂತೋಷವನ್ನು ಹಂಚಿಕೊಂಡರು.


Share: