One Tap News - Kannada News Daily

Header
collapse
...
Home / Mysore / ವಕೀಲ ಕೆ. ರಾಜು ನಾಪತ್ತೆ ಪ್ರಕರಣ ದಾಖಲಿಸಿದ ಬಿಳಿಕೆರೆ ಆರಕ್ಷಕ ಠಾಣೆಯಲ್ಲಿ ಮೊಕದಮ್ಮೆ ದಾಖಲು.

ವಕೀಲ ಕೆ. ರಾಜು ನಾಪತ್ತೆ ಪ್ರಕರಣ ದಾಖಲಿಸಿದ ಬಿಳಿಕೆರೆ ಆರಕ್ಷಕ ಠಾಣೆಯಲ್ಲಿ ಮೊಕದಮ್ಮೆ ದಾಖಲು.

2025-10-30  Mysore Desk  513 views
ವಕೀಲ ಕೆ. ರಾಜು ನಾಪತ್ತೆ ಪ್ರಕರಣ ದಾಖಲಿಸಿದ ಬಿಳಿಕೆರೆ ಆರಕ್ಷಕ ಠಾಣೆಯಲ್ಲಿ ಮೊಕದಮ್ಮೆ ದಾಖಲು.

ಬಿಳಿಕೆರೆ. 

          ಶ್ರೀಯುತ ಕೆ.ರಾಜು ಬಿನ್ ಲೇಟ್ ಕುಳ್ಳಪ್ಪ, 52 ವರ್ಷ, ವಕೀಲರು, ಹೊಸ ರತ್ನಪುರಿ ರಸ್ತೆ, ಗೋಕುಲ ಬಡಾವಣೆ, ಹುಣಸೂರು ಟೌನ್ - ಇವರು ದಿನಾಂಕ: 28/10/2025 ರಂದು ತಮ್ಮ ಮನೆಯಿಂದ ಆಫೀಸ್ ಗೆ ಹೋಗಿದ್ದು, ರಾತ್ರಿಯಾದರೂ ಮನೆಗೆ ವಾಪಸ್ಸು ಬಂದಿರುವುದಿಲ್ಲ. 

          ದಿನಾಂಕ: 29/10/2025 ರಂದು ಸಂಜೆ 7:30 ಗಂಟೆ ಸಮಯದಲ್ಲಿ ಕೆ.ರಾಜುರವರ ಕಾರು ಹುಣಸೂರು.ತಾ ಹೊಸರಾಮನಹಳ್ಳಿ ಗ್ರಾಮದ ಲಕ್ಷ್ಮಣತೀರ್ಥ ಸೇತುವೆ ಬಳಿಯಲ್ಲಿ ನಿಂತಿರುವುದು ಕಂಡು ಬಂದಿದ್ದು ಕೆ.ರಾಜು ರವರು ಕಾಣೆಯಾಗಿರುತ್ತಾರೆ. 

          ಈ ಸಂಬಂಧ ಈ ದಿನ ದಿನಾಂಕ: 30/10/2025 ರಂದು ಕೆ.ರಾಜು ರವರ ಪತ್ನಿ ಶ್ರೀಮತಿ ವಸಂತಲಕ್ಷ್ಮಿ ಎಂಬುವರು ನೀಡಿದ ದೂರಿನ ಮೇರೆಗೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿದ್ದಾನೆ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. ಆದ್ದರಿಂದ ಕಾಣೆಯಾಗಿರುವ ಶ್ರೀಯುತ ಕೆ.ರಾಜು (ವಕೀಲರು) ರವರ ಪತ್ತೆ ಸಂಬಂಧ ಯಾವುದೇ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ತಕ್ಷಣ ಬಿಳಿಕೆರೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರ ಮೊಬೈಲ್ ನಂ.9480805057 ಗೆ ಅಥವಾ ಠಾಣೆಯ ದೂರವಾಣಿ ಸಂಖ್ಯೆ 08222-240002 ಗೆ ಕರೆ ಮಾಡಿ ಮಾಹಿತಿ ತಿಳಿಸಲು ಕೋರಲಾಗಿದೆ. 


Share: