ಹುಣಸೂರು.
ಹುಣಸೂರು ತಾಲ್ಲೂಕಿನ ಪ್ರಗತಿಪರ ಸಂಘಟನೆಗಳ ವತಿಯಿಂದ ಸಾಮಾಜಿಕ ನ್ಯಾಯದ ಹರಿಕಾರರಾದ ಡಿ. ದೇವರಾಜ ಅರಸು ರವರ ಮೊಮ್ಮಗ ಸೂರಜ್ ಹೆಗ್ಡೆ ಬೆಳಗ್ಗಿನ ಜಾವ ಹಠಾತ್ ಸಾವು ಆಗಿರುವುದಕ್ಕೆ ದಿನಾಂಕ : 08-06-2026 ರ ಸೋಮವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್ ರವರು ಮಾತನಾಡಿ ಅರಸು ರವರ ವಂಶಸ್ಥರಾದ ಸೂರಜ್ ಹೆಗ್ಡೆ ರವರು ಹಠಾತ್ ಆಗಿ ಸಾವು ಆಗಿರುವುದಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿ ಅವರ ಸರಳತೆಯ ಬಗ್ಗೆ ಗುಣಗಾನ ಮಾಡಿದರು. ಅವರ ತಾತ ಅರಸು ರವರ ಸಾಮಾಜಿಕವಾದ ಬದ್ಧತೆ ಇವರಲ್ಲಿಯೂ ಇತ್ತು. ಆದರೆ ಸೂರಜ್ ಹೆಗ್ಡೆಯವರು ರಾಜಕೀಯವಾಗಿ ಮುಂದೆ ಬರದೆ ಎಲೆಮರೆ ಕಾಯಿಯಂತೆ ಬದುಕುತ್ತಾ ಯಾವುದೇ ರಾಜಕೀಯ ಪಕ್ಷಗಳು ಅವಕಾಶ ಕಲ್ಪಿಸಿಕೊಡದೆ ಇರುವುದು ಅತ್ಯಂತ ನೋವಿನ ವಿಷಯವಾಗಿದೆ ಎಂದರು. ಇವರಿಗೆ ರೈತರ ಬಗ್ಗೆ, ತಾಲ್ಲೂಕಿನ ಜನರ ಬಗ್ಗೆ ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡಿದ್ದರು. ಇವರಿಗೆ ಸಾವು ಸಂಭವಿಸಿರುವುದು ಅತ್ಯಂತ ನೋವಿನ ವಿಚಾರವಾಗಿದೆ. ಇವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದರು.
ದಸಂಸ ದ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು ಮಾತನಾಡಿ ಸಾಮಾಜಿಕ ನ್ಯಾಯದ ಹರಿಕಾರರಾದ ಡಿ. ದೇವರಾಜ ಅರಸು ರವರ ಮೊಮ್ಮಗ ಸೂರಜ್ ಹೆಗ್ಡೆ ರವರು ಹೃದಯಾಘಾತದಿಂದ ಮರಣ ಹೊಂದಿರುವುದು ದಸಂಸವು ಸಂತಾಪ ಸೂಚಿಸುತ್ತದೆ. ಅರಸು ರವರು ದೀನರು, ದಲಿತರು ನೊಂದ ಜನರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು. ಅವರಂತೆ ಸೂರಜ್ ಹೆಗ್ಡೆಯವರು ಸಹ ಸರಳತೆ ಹೊಂದಿದ್ದು, ಇವರಿಗೆ ಸಮಾಜದಲ್ಲಿ ಹೇಳಿಕೊಳ್ಳದಷ್ಟು ಅವಕಾಶಗಳು ಸಿಗದೆ ದೂರ ಉಳಿದಿದ್ದು ನೋವಿನ ಸಂಗತಿಯಾಗಿದೆ. ಬಡವರ ಬಗ್ಗೆ, ದೀನದಲಿತರ ಬಗ್ಗೆ ಅರಸು ರವರ ರೀತಿ ಇವರ ವಂಶದಲ್ಲಿ ಅರಸುರವರ ರೀತಿ ಮಾನವೀಯತೆಯ ಮೌಲ್ಯವಿರುವ ವ್ಯಕ್ತಿಗಳು ಬರಬೇಕಾಗಿದೆ ಎಂದರು.
ಸೂರಜ್ ಹೆಗ್ಡೆ ರವರ ಒಡನಾಡಿಯಾದ ವಿನೋಬಾ ಗಣೇಶ್ ರವರು ಮಾತನಾಡಿ ಸೂರಜ್ ರವರ ಸಾವು ತಾಲ್ಲೂಕಿನ ಜನತೆಗೆ ತುಂಬಲಾರದ ನಷ್ಟವಾಗಿದ್ದು, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕೊಡಲಿ ಎಂದರು.
ಈ ಸಂದರ್ಭದಲ್ಲಿ ದಸಂಸ ದ ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ನಾಗನಹಳ್ಳಿ ಮಹದೇವ, ಅಬ್ದುಲ್ ಮಾಲೀಕ್, ರಾಜು ಚಿಕ್ಕಹುಣಸೂರು, ಸಿದ್ದರಾಜು ಅತ್ತಿಕುಪ್ಪೆ, ಪ್ರಕಾಶ್ ಎಂ. ಆರ್ ಹೊಸಹಳ್ಳಿ, ನಾಗರಾಜೇಗೌಡ, ರಾಜ್ಯ ರೈತ ಸಂಘದ ಕಿರಿಜಾಜಿ ಧನಂಜಯ, ಮಾದಯ್ಯ, ಬಸವರಾಜೇಗೌಡ, ಸೋಮಶೇಖರ್, ಮಾದೇಗೌಡ, ಅಂಬೇಡ್ಕರ್ ನಗರದ ದಾಸಪ್ಪ, ಶೋಭಮ್ಮ ಮುಂತಾದವರು ಹಾಜರಿದ್ದು, ಶ್ರದ್ಧಾಂಜಲಿ ಸಲ್ಲಿಸಿದರು.