One Tap News - Kannada News Daily

Header
collapse
...
Home / Mysore / ಸಂಭ್ರಮ ಸಡಗರದಿಂದ ಡಾ. ಲೋಹಿತ್ ರವರ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

ಸಂಭ್ರಮ ಸಡಗರದಿಂದ ಡಾ. ಲೋಹಿತ್ ರವರ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

2026-06-04  Mysore Desk  53 views
ಸಂಭ್ರಮ ಸಡಗರದಿಂದ ಡಾ. ಲೋಹಿತ್ ರವರ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು
1002493661.jpg

ಹುಣಸೂರು. ಹುಣಸೂರಿನ ಹೆಸರಾಂತ ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಂಸ್ಥಾಪಕರು ಡಾ|| ಲೋಹಿತ್ ಪಿ.ಎಸ್ ರವರ 43 ನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಅಭಿಮಾನಿಗಳು. 

 ಡಾ. ಲೋಹಿತ್ ರವರು ಅಭಿಮಾನಿಗಳ ಒಡಗೂಡಿ ಬೆಳ್ಳಿಗ್ಗೆ 8:30 ಮೋದೂರು ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಶಾಲೆ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

 ಸಮಾಜಸೇವಕರಾದ  ತರಿಕಲ್ ರಾಜುರವರೊಂದಿಗೆ ಸೇರಿ  ದೇವರಾಜ್ ಅರಸು ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ದೇವರಾಜ್ ಅರಸು ರವರ ಪುತ್ತಳಿಗೆ ಪುಷ್ಪ ನಮನವನ್ನು ಸಲ್ಲಿಸಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಸಹೋದ್ಯೋಗಿ ಹುಟ್ಟುಹಬ್ಬ ಆಚರಿಸಿಕೊಂಡರು. 

1002498702.jpg

 ನಂತರ 11.30ಕ್ಕೆ ಕನಕ ಭವನದಲ್ಲಿ  ಉತ್ತಮ ಅಂಕಗಳನ್ನು ಪಡೆದ sslc ಮತ್ತು puc 400 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಯರಿಗೆ  ಪ್ರತಿಭಾ ಪುರಸ್ಕಾರ ಮತ್ತು ಗೌರವಧನ ವಿತರಣೆ ಮತ್ತು 100 ಸಂಖ್ಯೆ ರಂಗ ಕಲಾವಿದರು  ಅವರನ್ನು ಗೌರವಿಸಿ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು. 

1002498701.jpg

ಈ ಸಮಾರಂಭದ ಕಾರ್ಯಕ್ರಮಕ್ಕೆ  ಪರಮ ಪೂಜ್ಯ ಡಾ. ಶಿವಾನಂದಪುರಿ ಮಹಾಸ್ವಾಮೀಜಿಗಳು, ಕಾಗಿನೆಲೆ ಮಹಾಸಂಸ್ಥಾನ  ಕನಕ ಗುರು ಪೀಠ ಶಾಖಾಮಠ ಕೆ.ಆರ್. ನಗರ, ಗುರುಲಿಂಗ ಜಂಗಮದೇವರ ಮಠ ಗಾವಡಗೆರೆ  ಪರಮಪೂಜ್ಯ ನಟರಾಜ ಸ್ವಾಮೀಜಿಗಳು, ಉಕ್ಕಿನ ಕಂತೆ ಮಾಧಹಳ್ಳಿ ಮಠದ ಪರಮ ಪೂಜ್ಯ ಸಾಂಬಸದಾಶಿವ  ಸ್ವಾಮೀಜಿಗಳು ದಿವ್ಯ ಸಾನಿಧ್ಯವಹಿಸಿದ್ದರು. 

1002498700.jpg

 ಕಾರ್ಯಕ್ರಮವನ್ನು  ಹುಣಸೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಜಿ.ಡಿ. ಹರೀಶ್ ಗೌಡ್ರು ಉದ್ಘಾಟಿಸಿ ಶುಭ ಕೋರಿದರು.

 ಕಾರ್ಯಕ್ರಮದಲ್ಲಿ ಮಾಜಿ ನಗರ ನಗರಸಭೆ ಅಧ್ಯಕ್ಷರಾದ ಗಣೇಶ್ ಕುಮಾರಸ್ವಾಮಿ, ಕನ್ನಡ ಚಲನಚಿತ್ರ ಖ್ಯಾತ ನಟರಾದ ಶ್ರೀ ಅಭಿಜಿತ್ ಕುಮಾರ್, ಮಹಾದೇವಯ್ಯ, ಕೆ ಗಣಪತಿ ತರಿಕಲ್ ರಾಜು,  ದೊಡ್ಡಣ್ಣ, ಮೌರ್ಯ ಡಾ. ಲೋಹಿತ್ ಅಭಿಮಾನಿ ಬಳಗದ ಯುವಕರು ಯಜಮಾನರು ಗ್ರಾಮಸ್ಥರು ಎಲ್ಲಾ ಸ್ಥಳೀಯ ಸಂಸ್ಥೆಯ ಮುಖಂಡರು ಕಾರ್ಯಕ್ರಮದ ಕೇಂದ್ರ ಬಿಂದು, ಸಹಸ್ರಾರು ಸಂಖ್ಯೆಯಲ್ಲಿ ಡಾ. ಲೋಹಿತ್ ರವರ ಅಭಿಮಾನಿಗಳು ಈ ವೇಳೆ ಉಪಸ್ಥಿತರಿದ್ದರು. 

✍️ ಲೋಹಿತ್ ಗೌಡ ವಿ ಪಿ


Share: