One Tap News - Kannada News Daily

Header
collapse
...
Home / Kodagu / ಜೂನಿಯರ್ ಏಷಿಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಗೆ ಕೊಡಗಿನ ಬಿ. ದಿಯಾ ಭೀಮಯ್ಯ ಆಯ್ಕೆ

ಜೂನಿಯರ್ ಏಷಿಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಗೆ ಕೊಡಗಿನ ಬಿ. ದಿಯಾ ಭೀಮಯ್ಯ ಆಯ್ಕೆ

2026-06-24  Kodagu Desk  13 views
ಜೂನಿಯರ್ ಏಷಿಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಗೆ  ಕೊಡಗಿನ ಬಿ. ದಿಯಾ ಭೀಮಯ್ಯ ಆಯ್ಕೆ

ಮಡಿಕೇರಿ. 

ಭಾರತ ಜೂನಿಯರ್ ಬ್ಯಾಡ್ಮಿಂಟನ್ ತಂಡದಲ್ಲಿ ಕೊಡಗಿನ ಬಿ. ದಿಯಾ ಭೀಮಯ್ಯ 

ಭಾರತದ ಜೂನಿಯರ್ ತಂಡದ ನಂಬರ್ 1 ಆಟಗಾರ್ತಿಯಾದ ಬೊಪ್ಪಂಡ ದಿಯಾ ಭೀಮಯ್ಯ ಜಪಾನಿನಲ್ಲಿ  26 ಜೂನ್  ರಿಂದ 5  ಜುಲೈ ವರೆಗೆ ನಡೆಯುವ ಪ್ರತಿಷ್ಠಿತ ಏಷಿಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಗೆ ಆಯ್ಕೆಯಾಗಿರುತ್ತಾರೆ, ಇವರು 2025ರಲ್ಲಿ ಭಾರತವನ್ನು ಸಬ್ ಜೂನಿಯರ್ ವಿಭಾಗದಲ್ಲೂ ಪ್ರತಿನಿಧಿಸಿ ಉತ್ತಮ ಪ್ರದರ್ಶನ ತೋರಿದರು, 2026ರ ಏಪ್ರಿಲ್ ನಲ್ಲಿ ನಡೆದ ಅಂತರಾಷ್ಟ್ರೀಯ ಜೂನಿಯರ್ ಡಚ್ ಹಾಗೂ ಜರ್ಮನ್ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 

ತೀವ್ರ ಪೈಪೋಟಿ ಇರುವ ಬ್ಯಾಡ್ಮಿಂಟನ್ ನಲ್ಲಿ ದೇಶವನ್ನು ಪ್ರತಿನಿಧಿಸುವುದು ಬಹಳ ಕಷ್ಟ ಅಂತದರಲ್ಲಿ ಇದೊಂದು ಬಹಳ ಉತ್ತಮ ಸಾಧನೆಯಾಗಿದೆ, ಸಣ್ಣ ಪ್ರಾಯದಲ್ಲೇ ಇದರ ಬಗ್ಗೆ ಆಸಕ್ತಿ ಹೊಂದಿದ ಇವರ ಸಾಧನೆ ನಿಜಕ್ಕೂ ಸ್ಪೂರ್ತಿ ಇವರು ಮೊದಲಿಗೆ ಮೈಸೂರಿನ  ಸ್ಪೋರ್ಟ್ಸ್ ಪಾರ್ಕ್ ನಲ್ಲಿ ಅರುಣ್ ಪೆಮ್ಮಯ್ಯ ಅವರ ಬಳಿ ತರಬೇತಿ ಪಡೆದು ಇದೀಗ ಭಾರತದ ಪ್ರತಿಷ್ಠಿತ ಬ್ಯಾಡ್ಮಿಂಟನ್ ಸಂಸ್ಥೆಯಾದ ನ್ಯಾಷನಲ್ ಸೆಂಟರ್ ಆಫ್ ಎಕ್ಸೆಲೆನ್ಸ್ ( NCE ) ಅಸ್ಸಾಂನ ಗೌಹಾಟಿನಲ್ಲಿ ರಷ್ಯಾದ ತರಬೇತುದಾರರಾದ ಇವಾನ್ ಸುಜುನೋ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.


Share: