One Tap News - Kannada News Daily

Header
collapse
...
Home / Kodagu / ಹೋಂ ಸ್ಟೇಯಲ್ಲಿ ಗ್ಯಾಸ್ ಸೋರಿಕೆ, ಪ್ರವಾಸಕ್ಕೆಂದು ಬಂದಿದ ಮೈಸೂರಿನ ಯುವತಿ ಕೊಡಗಿನಲ್ಲಿ ಮೃತ.

ಹೋಂ ಸ್ಟೇಯಲ್ಲಿ ಗ್ಯಾಸ್ ಸೋರಿಕೆ, ಪ್ರವಾಸಕ್ಕೆಂದು ಬಂದಿದ ಮೈಸೂರಿನ ಯುವತಿ ಕೊಡಗಿನಲ್ಲಿ ಮೃತ.

2026-06-07  Kodagu Desk  50 views
ಹೋಂ ಸ್ಟೇಯಲ್ಲಿ ಗ್ಯಾಸ್ ಸೋರಿಕೆ,  ಪ್ರವಾಸಕ್ಕೆಂದು ಬಂದಿದ ಮೈಸೂರಿನ ಯುವತಿ ಕೊಡಗಿನಲ್ಲಿ ಮೃತ.

ಕೊಡಗಿನ ಸೋಮವಾರಪೇಟೆಯ ಹೋಂಸ್ಟೇ ಒಂದರಲ್ಲಿ ಇಂದು ಭಾನುವಾರ ಬೆಳಿಗ್ಗೆ ಸಂಭವಿಸಿದ ಗ್ಯಾಸ್ ಸೋರಿಕೆಯಿಂದ ಮೈಸೂರಿನ ಯುವತಿಯೊಬ್ಬರು ಮೃತಪಟ್ಟಿದ್ದಾರೆ.

     ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆಯ ನಿವಾಸಿ ಜಗನ್ನಾಥ್ ಹಾಗೂ ರೇಣುಕಾ ದಂಪತಿಯ ಪುತ್ರಿ ವಿನೂತ(27) ಮೃತ ದುರ್ದೈವಿ.

  ಕೊಡಗಿಗೆ ಪ್ರವಾಸ ಬಂದಿದ್ದ ಈಕೆ ಸೋಮವಾರಪೇಟೆಯ ಚೌಡ್ಲು ಗ್ರಾಮದ ಹೋಂಸ್ಟೆ ಅಲ್ಲಿ ತಂಗಿದ್ದಳು.ಇಂದು ಬೆಳಿಗ್ಗೆ ಸ್ನಾನ ಮಾಡಲು ಬಾತ್ ರೂಮಿಗೆ ತೆರಳಿದ್ದ ಸಂದರ್ಭದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ. ಬಾತ್ ರೂಮಿನಲ್ಲಿ ಕಿಟಕಿ ಇರಲಿಲ್ಲವೆಂದು ಹೇಳಲಾಗಿದೆ.


Share: