ಕುಶಾಲನಗರ :
ಕೊಡಗು ಜಿಲ್ಲೆಯ ಜಾತ್ಯಾತೀತ ಜನತಾ ದಳದ ಹಂಗಾಮಿ ಜಿಲ್ಲಾ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕುಶಾಲನಗರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೋಟಿ ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ಕುಶಾಲನಗರದ ಟಾಪ್ ಇನ್ ಟೌನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಿದ ಪಕ್ಷದ ಕಾರ್ಯಕರ್ತರು ಭವಿಷ್ಯದಲ್ಲಿ ಜಿಲ್ಲೆಯಲ್ಲಿ ನಡೆಯುವ ಪುರಸಭೆಗಳು, ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಪಕ್ಷದ ಸಂಘಟನೆ ಹಿತದೃಷ್ಟಿಯಿಂದ ಪೊನ್ನಂಪೇಟೆ ತಾಲ್ಲೂಕು ಕಾರ್ಮಾಡು ಸುಬ್ಬಣ್ಣ ಅವರನ್ನು ನೇಮಕ ಮಾಡಲಾಯಿತು.
ಪಕ್ಷದ ಮುಖಂಡ ಮಾಜಿ ಮಹಾ ಪ್ರಧಾನ ಕಾರ್ಯದರ್ಶಿ ಕೊತೂರು ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಇನ್ನೂ ಕೂಡ ಸುಭದ್ರವಾಗಿದ್ದು ನಾಯಕರಿಲ್ಲದೇ ಪಕ್ಷದ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡಿದ್ದರು.
ಈಗ ಸುಬ್ಬಣ್ಣ ಅವರ ಆಯ್ಕೆಯಿಂದಾಗಿ ಪಕ್ಷಕ್ಕೆ ಬಲ ಬಂದಿದೆ ಎಂದರು.
ವಕೀಲ ಮನೋಜ್ ಬೋಪಯ್ಯ, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಮೂಲದಿಂದ ಬಲಪಡಿಸಲು ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕಿದೆ. ಕಳೆದ ಚುನಾವಣೆಯಲ್ಲಿ ಮಡಿಕೇರಿಯಲ್ಲಿ ಕಾಂಗ್ರೆಸ್ ಅದೃಷ್ಟದಿಂದ ಬಂದಿದೆಯಾದರೂ ಬಿಜೆಪಿ ಈಗಲೂ ಬಲಿಷ್ಠವಾಗಿದೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಈ ಹಿಂದೆ ಇದ್ದ ಜೆಡಿಎಸ್ ಅನ್ನು ಮತ್ತೆ ಪ್ರಾಬಲ್ಯಕ್ಕೆ ತರಬೇಕಿದೆ ಎಂದರು.
ಹಂಗಾಮಿ ಅಧ್ಯಕ್ಷ ಸುಬ್ಬಣ್ಣ ಸಭೆ ಕುರಿತು ಮಾತನಾಡಿ ಕೊಡಗಿನಲ್ಲಿ ಜೆಡಿಎಸ್ ಸುಭಧ್ರವಾಗಿದೆ ನಾಯಕನಿಲ್ಲದೆ ಕಾರ್ಯಕರ್ತರು ಆತಂಕದಲ್ಲಿದ್ದು ಚುನಾವಣೆಗಳಲ್ಲಿ ಅನ್ಯ ಪಕ್ಷಗಳಿಗೆ ಬೆಂಬಲ ನೀಡುವಂತಾಗಿತ್ತು ಇದನ್ನೆಲ್ಲ ಅರಿತ ಕಾರ್ಯಕರ್ತರು ಜೆಡಿಎಸ್ ಪಕ್ಷ ಸಂಘಟಿಸಲು ನಾಯಕನ ಅವಶ್ಯಕತೆ ಇದೆ ಹಂಗಾಮಿ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಿದೀರ ಹಾಗಾಗಿ ಪಕ್ಷ ಸಂಘಟಿಸಲು ಕಾರ್ಯಕರ್ತರೊಡನೆ ನಾಯಕರ ವಿಶ್ವಾಸಗಳಿಸಿಕೊಂಡು ಪಕ್ಷ ಕಟ್ಟುತ್ತೇನೆ ಎಂದರು.
ಸದ್ಯದಲ್ಲೇ ರಾಜ್ಯ ನಾಯಕರನ್ನು ಕೊಡಗಿಗೆ ಕರೆತಂದು ಪಕ್ಷ ಸಂಘಟನೆಗೆ ರೂಪುರೇಷೆ ರಚಿಸುತ್ತೇನೆ ಎಂದರು.
ಮುಂದಿನ ದಿನಗಳಲ್ಲಿ ಪಕ್ಷದ ಉಸ್ತುವಾರಿ ಮಾಜಿ ಸಚಿವ ಸಾರಾ ಮಹೇಶ್ ಅವರನ್ನು ಭೇಟಿ ಮಾಡಿ ಪಕ್ಷದ ಹೈಕಮಾಂಡ್ ನೀಡುವ ಸಲಹೆ ಹಾಗೂ ನಿರ್ದೇಶನಗಳನ್ನು ಪಾಲಿಸುವಂತೆ ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಪಕ್ಷದ ಪ್ರಮುಖರಾದ ಬೀಟಿಕಟ್ಟೆ ಹೆಚ್.ಡಿ. ಪ್ರವೀಣ್, ಸೋಮವಾರಪೇಟೆ ನಾಗರಾಜು, ವಕೀಲರಾದ ಮನೋಜ್ ಬೋಪಯ್ಯ, ಕೋತೂರು ಸುರೇಶ್, ಕಾಟ್ನಮನೆ ವಿಠಲಗೌಡ, ಸುಂಟಿಕೊಪ್ಪದ ಎಂ.ಎಂ. ಷರೀಫ್, ಸ್ವಾಗತ್ ಗೌಡ, ಸಂದೀಪ್, ರಾಮು ಸಭೆಯ ಆಯೋಜಕ ಕುಶಾಲನಗರದ ಹೆಚ್.ಟಿ.ವಸಂತ, ಡಿ.ಪಿ.ಗಿರೀಶ್, ಸಂತೋಷ್, ವೆಂಕಟೇಶ್, ಕೆ.ಸಿ.ರಘು, ಶ್ರೀನಿವಾಸ್, ಕೂಡಿಗೆಯ ರಾಜು, ರಾಮಚಂದ್ರ ಸೇರಿದಂತೆ ನೂರಾರು ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.
✍️ ಲೋಹಿತ್ ಗೌಡ.