One Tap News - Kannada News Daily

Header
collapse
...
Home / Kodagu / ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ..ಮೂರು ಲಕ್ಷ ಅನುದಾನ ಒದಗಿಸಿದ ಡಾ ಮಂತರ್ ಗೌಡ.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ..ಮೂರು ಲಕ್ಷ ಅನುದಾನ ಒದಗಿಸಿದ ಡಾ ಮಂತರ್ ಗೌಡ.

2025-10-28  Kodagu Desk  10 views
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ..ಮೂರು ಲಕ್ಷ ಅನುದಾನ ಒದಗಿಸಿದ ಡಾ ಮಂತರ್ ಗೌಡ.

ಮಡಿಕೇರಿ. 

ಮಡಿಕೇರಿ ನಗರದಲ್ಲಿ ಸ್ಥಾಪಿತವಾಗಿರುವ ಸ್ವತಂತ್ರ ಭಾರತದ ಪ್ರಪ್ರಥಮ ಮಹಾನ್ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನವರ ಪ್ರತಿಮೆ ಮತ್ತು ಸುತ್ತಲಿನ ಉದ್ಯಾನ ವನದ ಅಭಿವೃದ್ದಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ತಮ್ಮ ಶಾಸಕರ ನಿಧಿಯಿಂದ ಮೂರು ಲಕ್ಷ ರೂಗಳ ಅನುದಾನ ಒದಗಿಸಿದ್ದಾರೆ.

ಇಂದು ಶಾಸಕರು  ಮಡಿಕೇರಿಗೆ ಆಗಮಿಸಿದ ಸಂಧರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಹಾಗೂ ಮಡಿಕೇರಿ ನಗರ ಸಭೆಯ ನಾಮನಿರ್ದೇಶನ ಸದಸ್ಯರಾದ ಮಂಡಿರ ಸದಾ ಮುದ್ದಪ್ಪ ನವರು  ಅಭಿವೃದ್ಧಿ ಗೆ ಸಂಭಂದಿಸಿದ ಅಂದಾಜು ಪಟ್ಟಿಯನ್ನು ಸಲ್ಲಿಸಿದರು.

ಕೂಡಲೇ ಸ್ಪಂದಿಸಿದ ಡಾ. ಮಂತರ್ ಗೌಡ ರವರು ಅನುದಾನ ಘೋಷಣೆ ಮಾಡಿದ್ದಾರೆ.

ನಂತರ ಮಾತನಾಡಿದ ಡಾ ಮಂತರ್ ಗೌಡ ರವರು  ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ನವರು ದೇಶ ಕಂಡ ಅಪ್ರತಿಮ ಸೇನಾನಿಗಳಾಗಿದ್ದು ಅವರ ಸಾಧನೆಗಳನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ  ಈ ಮಹಾನ್ ನಾಯಕರಿಗೆ ಸಂಭಂದಿಸಿದ ಪ್ರತಿಯೊಂದು ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ  ಮೂಡಾ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ ಹಾಗೂ ಪ್ರಮುಖರು ಶಾಸಕರೊಂದಿಗೆ ಇದ್ದರು.


Share: