ಮಡಿಕೇರಿ.
ಸೈನಿಕಶಾಲೆಗಳ 6 ಮತ್ತು 9, ನೇ ತರಗತಿಗೆ ಸೇಪ೯ಡೆ ಸಂಬಂಧಿತ ವಿದ್ಯಾಥಿ೯ ಮತ್ತು ಪೋಷಕರಲ್ಲಿ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ತರಬೇತಿ ಕಾಯಾ೯ಗಾರ ಆಯೋಜಿಸಲಾಗಿದೆ.
ಮಡಿಕೇರಿ ನಗರದ ಸಕಾ೯ರಿ ಬಸ್ ನಿಲ್ದಾಣ ಬಳಿಯಿರುವ ಕೊಡಗು ಶಿಶುಕಲ್ಯಾಣ ಸಂಸ್ಥೆಯಲ್ಲಿ ನವೆಂಬರ್ 2 ರ ಭಾನುವಾರದಿಂದ ಪ್ರತೀ ಭಾನುವಾರಗಳಂದು 10 ಭಾನುವಾರಗಳ ಕಾಲ ಸೈನಿಕ ಶಾಲಾ ಪರೀಕ್ಷಾ ಮಾಹಿತಿ ಕಾಯಾ೯ಗಾರ ಪ್ರತೀ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜರುಗಲಿದೆ.
ಸರಗೂರು ಸೈನಿಕಶಾಲೆಯ ಪರಿಣಿತ ಅಧ್ಯಾಪಕರು ಸೇರಿದಂತೆ ವಿವಿಧ ವಿಷಯ ತಜ್ಞರು ಈ ಕಾಯಾ೯ಗಾರದಲ್ಲಿ ಉಪಯುಕ್ತ ಮಾಹಿತಿ ನೀಡಲಿದ್ದಾರೆ. ನವೆಂಬರ್ 2 ರಂದು ಬೆಳಗ್ಗೆ 9.30 ಗಂಟೆಗೆ ಉದ್ಘಾಟನೆ ನಂತರ ವಿದ್ಯಾರ್ಥಿಗಳ ಪೋಷಕರಿಗೂ ಮಾಹಿತಿ ಶಿಬಿರ ಆಯೋಜಿತವಾಗಿದೆ.
ಸೈನಿಕಶಾಲೆಗೆ ಸೇರಲಿಚ್ಚಿಸುವ ಕೊಡಗಿನ ವಿದ್ಯಾಥಿ೯ಗಳು ಈ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗ ಸಂಪಕ೯ ಸಂಖ್ಯೆ ಡಾ. ಸಿ. ಆರ್. ಪ್ರಶಾಂತ್ -9448246950, ಅಂಕಾಚಾರಿ 9964103322 ,
ಪ್ರಕಾಶ್ ಪೂವಯ್ಯ.
7760940616