One Tap News - Kannada News Daily

Header
collapse
...
Home / Kodagu / ರಾಷ್ಟ್ರೀಯ ಏಕಾತ ದಿನ ದ ಅಂಗವಾಗಿ ನಡೆದ ಮ್ಯಾರಥಾನ್ ಓಟ.

ರಾಷ್ಟ್ರೀಯ ಏಕಾತ ದಿನ ದ ಅಂಗವಾಗಿ ನಡೆದ ಮ್ಯಾರಥಾನ್ ಓಟ.

2025-11-04  Kodagu Desk  8 views
ರಾಷ್ಟ್ರೀಯ ಏಕಾತ ದಿನ ದ ಅಂಗವಾಗಿ ನಡೆದ ಮ್ಯಾರಥಾನ್ ಓಟ.

ವಿರಾಜಪೇಟೆ. 

ಹಸಿರು ನಿಶಾನೆ ತೋರಿ ಉದ್ಘಾಟನೆ ಮಾಡಿದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ.

ಇಂದು ರಾಷ್ಟ್ರ ಕಂಡ ಧೀಮಂತ ನಾಯಕ ಹಾಗೂ ಉಕ್ಕಿನ ಮನುಷ್ಯ ಎಂದು ಹೆಸರು ಪಡೆದಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಏಕಾತ ದಿನ ಎಂದು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಯ ವತಿಯಿಂದ ನಡೆಯಿತು.

ವಿರಾಜಪೇಟೆ ತಾಲ್ಲೂಕು ಮೈದಾನದಲ್ಲಿ ಪ್ರತಿಜ್ಞಾ ಬೋಧನೆ ಸ್ವೀಕರಿಸಿ ಮಾತನಾಡಿ ದ ಶಾಸಕ ಪೊನ್ನಣ್ಣ ಅವರು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ ಅ ಸಮಯದಲ್ಲಿ ದೇಶಕ್ಕಾಗಿ ಮನೆ.ಕುಟುಂಬ.ಎಲ್ಲವನ್ನೂ ತ್ಯಜಿಸಿ ದೇಶಕ್ಕೊಸ್ಕರ ಜೈಲು ಶಿಕ್ಷೆಯನ್ನು ವರ್ಷನೂ ಗಟ್ಟಲೆ ಕರೆದಿದ್ದಾರೆ ಎಂದು ತಿಳಿಸಿದರು.

ದೇಶಕ್ಕಾಗಿ ಪ್ರಾಣತ್ಯಾಗ ಬಲಿಯಾದ ಯಾರೋಬ್ಬರನ್ನು ಮರೆಯಬಾರದು.ಶಾಲಾ ಮಕ್ಕಳು ಕೂಡ ಬಿಡುವಿನ ವೇಳೆಯಲ್ಲಿ ಇಂತಹ ಮಹಾನ್ ವ್ಯಕ್ತಿಗಳ ಸಾಧನೆ ಬಗ್ಗೆ ತಿಳಿದುಕೊಳ್ಳ ಬೇಕು ಎಂದು ಶಾಸಕ ಪೊನ್ನಣ್ಣ ತಿಳಿಸಿದರು.

ಪ್ರತಿಜ್ಞ ವಿಧಿಯನ್ನು ವಿರಾಜಪೇಟೆ ವೃತ್ತ ನೀರಿಕ್ಷಕ ಅನುಪ್ ಮಾದಪ್ಪ ಬೋಧಿಸಿದರು.

ಪೊಲೀಸ್ ಡಿ.ವೈ.ಎಸ್. ಪಿ.ಮಹೇಶ್ ಕುಮಾರ್ ಉಪಸ್ಥಿತರಿದ್ದರು.

ನಂತರ ನಡೆದ ಜಾಥದಲ್ಲಿ ಸಂತ ಅನ್ನಮ್ಮ ಶಾಲೆ ಯ ಬ್ಯಾಂಡ್ ಸೆಟ್.

ವಿರಾಜಪೇಟೆ ನಗರ, ಗ್ರಾಮಾಂತರ, ವೃತ್ತ ದ ಪೊಲೀಸರು, ಅಧಿಕಾರಿಗಳದ ಪ್ರಮೋದ್ ಕುಮಾರ್, ಶ್ರೀ ಮತಿ.ಲತಾ, ಶ್ರೀ ಮತಿ ವಾಣಿ ಶ್ರಿ, ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.

ವಿರಾಜಪೇಟೆ. ಲಯನ್ಸ್ ಕ್ಲಬ್ ನ ಪೌಲ್ ಝೇವಿಯರ್, ಪ್ರತಾಪ್, ರೋಟರಿ ಕ್ಲಬ್, ಕ್ಲಬ್ ಮಹೀಂದ್ರ, ಡೆಂಟಲ್ ಕಾಲೇಜು, ಸೀನಿಯರ್ ಕಾಲೇಜು, ವಕೀಲರಾದ ಸಂಘ, ಕೊಡವ ಸಮಾಜದ ಅದ್ಯಕ್ಷರಾದ ರವಿ ಉತ್ತಪ್ಪ ಉಪಾಧ್ಯಕ್ಷ ಕಾಣತ್ತಂಡ ಜಗದೀಶ್,ಇನ್ನಿತರ ಕಾಲೇಜು ವಿದ್ಯಾರ್ಥಿಗಳು, ಸೇರಿದಂತೆ ಹಲವಾರು ಸಂಸ್ಥೆಯ ಪಧಾದಿಕಾರಿಗಳು ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.

ತಾಲ್ಲೂಕು ಮೈದಾನದಿಂದ ಆರಂಭಗೊಂಡ ಮ್ಯಾರಥಾನ್ ರ್ಯಾಲಿ ಗಡಿಯಾರ ಕಂಬದ ಮುಖ್ಯ ರಸ್ತೆಯ ಮೂಲಕ ಖಾಸಗಿ ಬಸ್ ನಿಲ್ದಾಣ ಅಬ್ದುಲ್ ಕಲಾಂ ರಸ್ತೆ ಗೋಣಿಕೊಪ್ಪ ರಸ್ತೆ ಸರ್ಕಾರಿ ಬಸ್ ನಿಲ್ದಾಣ ದೊಡ್ಡಟ್ಟಿ ಚೌಕಿ ಎಫ್ ಎಮ್ ಸಿ ರಸ್ತೆ ಮೂಲಕ ಮಹಿಳಾ ಸಮಯದಲ್ಲಿ ಸಂಪನ್ನ ಗೊಂಡಿತು..


Share: