One Tap News - Kannada News Daily

Header
collapse
...
Home / Kodagu / ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೊಕು ಒಕ್ಕಲಿಗರ ಸಂಘದ ಆಡಳಿತ ಮಂಡಳಿ ವಿಸ್ತರಣೆ.

ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೊಕು ಒಕ್ಕಲಿಗರ ಸಂಘದ ಆಡಳಿತ ಮಂಡಳಿ ವಿಸ್ತರಣೆ.

2025-11-26  Kodagu Desk  145 views
ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೊಕು ಒಕ್ಕಲಿಗರ ಸಂಘದ ಆಡಳಿತ ಮಂಡಳಿ ವಿಸ್ತರಣೆ.

 

ವಿರಾಜಪೇಟೆ.
ವಿರಾಜಪೇಟೆ ನಗರದಲ್ಲಿ ಇಂದು  ವಿರಾಜಪೇಟೆ ಪೊನ್ನಂಪೇಟೆ ತಾಲೂಕು, (ದಕ್ಷಿಣ ಕೊಡಗು) ಒಕ್ಕಲಿಗರ ಸಂಘದ ಅಧ್ಯಕ್ಷರಾದ ಕಾರ್ಮಾಡು ಸುಬ್ರಹ್ಮಣ್ಯ (ಸುಬ್ಬಣ್ಣ) ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ತೆರುವಾದ ಕೆಲವು ಗ್ರಾಮಗಳಿಗೆ ನಿರ್ದೇಶಕರನ್ನು ಆಯ್ಕೆಮಾಡಲಾಯಿತು.
ಮಗ್ಗುಲ ಗ್ರಾಮದಿಂದ ಹಿರಿಯ ವಕೀಲ ವಿ. ಪಿ ರಮೇಶ್ ರವರನ್ನು ನಿರ್ದೇಶಕ ಮತ್ತು ಕಾನೂನು ಸಲಹೆಗಾರರಾಗಿ, 
ಮೈತಾಡಿ ಗ್ರಾಮದಿಂದ ಮಾಜಿ ಯುವ ವೇದಿಕೆ ಅಧ್ಯಕ್ಷ ವಿ. ಪಿ ಲೋಹಿತ್ ಗೌಡರವರನ್ನು  ನಿರ್ದೇಶಕರಾಗಿ ನೇಮಕ ಮಾಡಿಕೊಳ್ಳಲಾಯಿತು.
ಪ್ರಧಾನ ಕಾರ್ಯದರ್ಶಿ  ಕೊಟ್ಟೆಕೊಪ್ಪ ಗ್ರಾಮದ ವಿ. ಎಲ್ ಸುರೇಶ್ ರವರು ಮಾತನಾಡಿ ಸಂಘವು ಇನ್ಮುಂದೆ ಸಕ್ರೀಯವಾಗಿ ನಡೆಯುವಂತೆ ಎಲ್ಲಾ ರೀತಿಯಲ್ಲಿ  ಆಡಿಟ್ ಮತ್ತು ರಿನಿವಲ್ ಆಗಿದ್ದು ಮುಂದಿನ ದಿನಗಳಲ್ಲಿ ಸಕ್ರೀಯವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದರು.


ಅಧ್ಯಕ್ಷ ಸುಬ್ಬಣ್ಣರವರು ಮಾತನಾಡಿ ಸಂಘವು ಹಲವು ತೊಡಕುಗಳನ್ನು  ನಿವಾರಿಸಿಕೊಂಡು ಸಾಗುತ್ತಿದೆ ಮುಂದೆ ಕೂಡ ಆಡಳಿತ ಮಂಡಳಿಯ ಎಲ್ಲರ ವಿಶ್ವಾಸದೊಂದಿಗೆ, ಸಮುದಾಯದ ಹಿರಿಯರು, ಮುಖಂಡರು ಸ್ವಾಮೀಜಿಗಳೊಂದಿಗೆ ಚರ್ಚಿಸಿ ಜನಪರ ಸೇವೆ ಮಾಡಲು ಪ್ರವೃತ್ತರಾಗುತ್ತೇವೆ ಎಂದರು.


ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ  ಕಣ್ಣಂಗಾಲ ಗ್ರಾಮದ ಕೆ. ಪಿ ನಾಗರಾಜು, ಕೋತೂರಿನ ಮಾಜಿ ಪ್ರಧಾನ ಕಾರ್ಯದರ್ಶಿ ಕೆ. ಆರ್ ಸುರೇಶ್, ಕೈಕೇರಿಯ ವಿ. ಪಿ ರಾಜ, ಹಾತೂರಿನ ಹೆಚ್ ಎ ಗಣೇಶ್, ಕೋತೂರಿನ ಬಸವರಾಜ್ ಮತ್ತು ನಿರ್ದೇಶಕಿ ಶ್ರೀಮತಿ ಪದ್ಮರವರು ಉಪಸ್ಥಿತರಿದ್ದರು.


Share: