ವಿರಾಜಪೇಟೆ.
ವಿರಾಜಪೇಟೆ ಸಾರ್ವಜನಿಕ ರಸ್ತೆಗಾಗಿ ನಡೆಯುತ್ತಿದ್ದ ಪ್ರತಿಭಟನೆ ಇಂದು ಅಂತ್ಯಗೊಂಡಿತು.
ಕಳೆದ ಎರಡು ದಿನಗಳಿಂದ ನಿರಂತರವಾಗಿ ವಿರಾಜಪೇಟೆ ಬ್ಲಾಕ್ ನಂಬರ್ ಐದರಲ್ಲಿ ಸಾರ್ವಜನಿಕ ರಸ್ತೆಗಾಗಿ ಪ್ರತಿಭಟನೆ ನಡೆಸಿದರು.

ಅಲ್ಲದೆ ಮುಖ್ಯ ರಸ್ತೆಗಾಗಿ ಅಡ್ಡ ರಸ್ತೆಗೆ ತೆರಳುವ ದಾರಿ ಅಡ್ಡಲಾಗಿ ಸಿಮೆಂಟ್ ಅಂಗಡಿ ಮಾಲಿಕರೊಬ್ಬರು ಪ್ರತಿ ನಿತ್ಯ ಕಿರುಕುಳ ಕೊಡುತ್ತಿದ್ದು ನನ್ನದೆ ಸ್ವಂತ ರಸ್ತೆ ಎಂದು ಹಲವರಿಗೆ ತಪ್ಪು ಮಾಹಿತಿ ನೀಡುತ್ತಿದ್ದರು.
ಕಳೆದ ಎರಡು ದಿನಗಳಿಂದ ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ನಾಚಪ್ಪ ಹಾಗೂ ಸಿಬ್ಬಂದಿಗಳು ಸಂಭಂದಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಿ ಸಂಬಂಧಿಸಿದ ವ್ಯಕ್ತಿಯಿಂದ ಸಂಪೂರ್ಣ ಮಾಹಿತಿ ಪಡೆದು ಇದು ಸಾರ್ವಜನಿಕ ರಸ್ತೆ ಯಾಗಿದ್ದು ಇನ್ನೂ ಮುಂದೆ ಅಲ್ಲಿ ಸಾರ್ವಜನಿಕ ಸಂಚಾರಕ್ಕೆ ತೊಂದರೆ ನೀಡುವುದಿಲ್ಲ ಎಂದು ಪುರಸಭೆಗೆ ಮುಚ್ಚಳಿಕೆ ಬರೆದುಕೊಟ್ಟು ಇನ್ನೂ ಮುಂದೆ ಈ ರಸ್ತೆಯ ಬಗ್ಗೆ ಯಾವುದೇ ಸಮಸ್ಯೆ ಕೊಡುವುದಿಲ್ಲ ಎಂದು ಬರೆದುಕೊಟ್ಟ ಹಿನ್ನೆಲೆಯಲ್ಲಿ ಎರಡು ಮುಖ್ಯಾಧಿಕಾರಿ ನಾಚಪ್ಪ ಮತ್ತು ವಿರಾಜಪೇಟೆ ನಗರ ಪೊಲೀಸ್ ಠಾಣೆ ಅಧಿಕಾರಿ ಪ್ರಮೋದ್ ಕುಮಾರ್ ಅವರ ಸಮ್ಮುಖದಲ್ಲಿ ಇಂದು ಪ್ರತಿಭಟನಾ ನಿರಂತರ ಮಾತನಾಡಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ.
ಸತತ ಎರಡು ದಿನಗಳ ಕಾಲ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೊಡಗು ಜಿಲ್ಲಾ ಬಿಎಸ್ ಜಿಲ್ಲಾ ಅದ್ಯಕ್ಷರಾದ ದಿವಿಲ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಟ್ಟಣದ ಹಲವಾರು ನಾಗರೀಕರು ಪಾಲ್ಗೊಂಡಿದ್ದರು.
ನಂತರ ಮಾತನಾಡಿ ದಿವಿಲ್ ಕುಮಾರ್ ಇದು ದೊಡ್ಡ ಸಮಸ್ಯೆ ಅಲ್ಲ ಆದರೆ ಮುಖ್ಯಾಧಿಕಾರಿ ಈ ಘಟನೆಯ ಬಗ್ಗೆ ಹೆಚ್ಚಿನ ಮುತುವರ್ಜಿಯಿಂದ ಗಮನ ಹರಿಸಿದ್ದರೆ ಈ ರೀತಿಯ ಪ್ರತಿಭಟನೆ ನಡೆಯುತ್ತಿರಲಿಲ್ಲ ಎಂದರು.
ಮುಂದೆ ಈ ರೀತಿಯ ಸಾರ್ವಜನಿಕರಿಗೆ ತೊಂದರೆ ನೀಡುವ ಘಟನೆಗಳು ನಡೆದರೆ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಅಲ್ಲದೆ ಪೊಲೀಸರು ಕೂಡ ಈ ಸಾರ್ವಜನಿಕ ರಸ್ತೆಯ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಮನವಿ ಮಾಡಿದರು.
ಒಟ್ಟಾರೆ ಈ ಪ್ರತಿಭಟನೆಯಿಂದ ನ್ಯಾಯಕ್ಕೆ ಸಿಕ್ಕ ಜಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಐದನೇ ಬ್ಲಾಕ್ ನ ಗಣೇಶ್, ಸುಜಿತ್, ದರ್ಶನ, ಚಂದ್ರಕಲಾ, ಪುಷ್ಪ ವತಿ, ದೇವಕ್ಕಿ, ರಸಿನಾ, ಸ್ರಜನ್, ಸೇರಿದಂತೆ ಪಟ್ಟಣ ಪಂಚಾಯತಿ ಮಾಜಿ ಸದಸ್ಯರು, ವಿವಿಧ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.