One Tap News - Kannada News Daily

Header
collapse
...
Home / Kodagu / ಆಸ್ತಿಗಾಗಿ ಕಲಹ: ಎರಡು ಕುಟುಂಬಗಳ ನಡುವೆ ಹೊಡೆದಾಟ, ಕಾಲಿಗೆ ಗುಂಡು ಹೊಡೆದ ಅಪ್ಪಚ್ಚು

ಆಸ್ತಿಗಾಗಿ ಕಲಹ: ಎರಡು ಕುಟುಂಬಗಳ ನಡುವೆ ಹೊಡೆದಾಟ, ಕಾಲಿಗೆ ಗುಂಡು ಹೊಡೆದ ಅಪ್ಪಚ್ಚು

2025-12-11  Kodagu Desk  68 views
ಆಸ್ತಿಗಾಗಿ ಕಲಹ: ಎರಡು ಕುಟುಂಬಗಳ ನಡುವೆ ಹೊಡೆದಾಟ, ಕಾಲಿಗೆ ಗುಂಡು ಹೊಡೆದ ಅಪ್ಪಚ್ಚು

ವಿರಾಜಪೇಟೆ. 

ನೆನ್ನೆ ಬೆಳಗ್ಗೆ ವಿರಾಜಪೇಟೆ ಹೊರವಲಯದ ಕಾವಾಡಿ ಗ್ರಾಮದಲ್ಲಿ ಕಾಫಿ ಕೊಯ್ಯಲು ತೆರಳಿದ್ದ ವೇಳೆ ತಮ್ಮದೇ ಕುಟುಂಬದ ಸದಸ್ಯರ ನಡುವೆ ತೋಟದ ವಿಷಯದಲ್ಲಿ ಜಗಳ ಮಾಡಿಕೊಂಡು ವಿರಾಜಪೇಟೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ.

ಆದರೂ ಕೂಡ ಮಾಚಿಮಂಡ ಅಪ್ಪಚ್ಚು ಹಾಗೂ ಅವರ ಪುತ್ರ ಅಮೃತ್ ಹಾಗೂ ಮಾಚಿಮಂಡ ರತನ್ ಹಾಗೂ ಪುತ್ರ ಬ್ರಿಜೇಶ್ ಅವರು ನೆನ್ನೆ ಸಣ್ಣಪುಟ್ಟ ಜಗಳ ಮಾಡಿಕೊಂಡು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ವಿಚಾರಣೆ ಮಾಡುವುದಾಗಿ ತಿಳಿಸಿದ್ದರು.

ಇಂದು ಬೆಳಗ್ಗೆ ರತನ್ ಹಾಗೂ ಬ್ರಿಜೆಶ್ ಇಂದು ಬೆಳಗ್ಗೆ ಏಳು ಗಂಟೆಗೆ ಕೆಲಸಗಾರರನ್ನು ಕರೆದುಕೊಂಡು ಕಾಫಿ ಕುಯ್ಯಲು ಮುಂದಾಗಿದ್ದಾರೆ.

ನಮ್ಮ ತೋಟದಲ್ಲಿ ನೀವು ಕಾಫಿ ಏಕೆ  ಕುಯ್ಯುತ್ತಿರಾ ಎಂದು ಎರಡು ಕುಟುಂಬದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.

ಅಪ್ಪಚ್ಚು ಅವರು ತನ್ನ ವಾಹನದಲ್ಲಿ ಕೋವಿ ತಂದು ಒಂದು ಬೆದರಿಕೆ ಗುಂಡು ಹರಿಸಿದ್ದಾರೆ, ಆದರೂ ಕೂಡ ಕಾಪಿ ಕುಯ್ಯಲು ಮುಂದುವರಿಸಿದ ಹಿನ್ನೆಲೆಯಲ್ಲಿ ಅಪ್ಪಚ್ಚು ಅವರು ರತನ್ ಪುತ್ರನ ಕಾಲಿನ ಬಳಿ ಗುಂಡು ಹಾರಿಸಿದರು ಗುಂಡು ಚದುರಿ ಕಾಲಿಗೆ ಗಂಭೀರ ಸ್ವರೂಪದ ಗಾಯ ಉಂಟಾಗಿದೆ, ನಂತರ ರತನ್ ಕೂಡ ಹಲ್ಲೆಗೆ ಮುಂದಾದಗ ಅಪ್ಪಚ್ಚು ಅವರ ಪುತ್ರ ಅಮೃತ್ ಹಾಗೂ ಸಂಗಡಿಗರು ಕತ್ತಿಯಿಂದ ರತನ್ ಮೇಲೆ ಹಲ್ಲೆ ಮಾಡಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವೈದ್ಯರು ಇಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮವನ್ನು ಅನುಸರಿಸಿದ್ದಾರೆ.


Share: