One Tap News - Kannada News Daily

Header
collapse
...
Home / Kodagu / ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದಲ್ಲಿ ಅಸಮರ್ಪಕ ಆಹಾರ ವಿತರಣೆ ಪೋಷಕರ ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ - ತುರ್ತು ಸಭೆ ಕರೆದ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ

ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದಲ್ಲಿ ಅಸಮರ್ಪಕ ಆಹಾರ ವಿತರಣೆ ಪೋಷಕರ ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ - ತುರ್ತು ಸಭೆ ಕರೆದ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ

2025-12-26  Kodagu Desk  5 views
ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದಲ್ಲಿ ಅಸಮರ್ಪಕ ಆಹಾರ ವಿತರಣೆ  ಪೋಷಕರ ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ - ತುರ್ತು ಸಭೆ ಕರೆದ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ

ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದಲ್ಲಿ ಅಸಮರ್ಪಕ ಆಹಾರ ವಿತರಣೆ  ಪೋಷಕರ ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ

 ತುರ್ತು ಸಭೆ ಕರೆದಿರುವ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ

ಪೊನ್ನಂಪೇಟೆ. 

ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದಲ್ಲಿ ಇತ್ತೀಚಿಗೆ ವಿದ್ಯಾರ್ಥಿಗಳಿಗೆ, ಸಮರ್ಪಕವಾಗಿ ಗುಣಮಟ್ಟದ ಆಹಾರ, ಹಾಗೂ ಇಲಾಖೆಯ ನಿಯಮದಂತೆ ಆಹಾರ ವಿತರಿಸುತ್ತಿಲ್ಲ ಎಂಬ ಆರೋಪದಡಿಯಲ್ಲಿ ಇಂದು ಪೋಷಕರು ಹಾಗೂ ಸಾರ್ವಜನಿಕರು ಸಂಜೆ ವಿದ್ಯಾರ್ಥಿನಿಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭ ಆಹಾರ ಮಾಡುವ ಗುತ್ತಿಗೆದಾರರು ಹಾಗೂ ಪೋಷಕರ ನಡುವೆ ಮಾತಿನ ಚಿಕ್ಕಮಕಿ ಕೂಡ ನಡೆಯಿತು.

ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಕೂಡ ಕಳಪೆ ಆಹಾರ ಮಟ್ಟದ ಗುಣದ ಬಗ್ಗೆ ತಮ್ಮ ಅನಿಸಿಕೆಗಳನ್ನು ಈ ಸಂದರ್ಭ  ವ್ಯಕ್ತಪಡಿಸಿದರು. ಈ ಬಗ್ಗೆ ಕ್ರೀಡಾ ಇಲಾಖೆಯ  ಮುಖ್ಯಸ್ಥರಿಗೆ ದೂರವಾಣಿ ಮೂಲಕ ವಿಚಾರವನ್ನು ಕೂಡ ತಿಳಿಸಲಾಯಿತು. ನಂತರ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯನವರ ಗಮನಕ್ಕೆ ಪೋಷಕರು ದೂರವಾಣಿ ಮೂಲಕ ಇಲ್ಲಿಯ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ನಂತರ ಈ ಸಂಬಂಧ ನಾಳೆ ಬೆಳಿಗ್ಗೆ ಶನಿವಾರ 11 ಗಂಟೆಗೆ ಪೋಷಕರು ಹಾಗೂ ಅಧಿಕಾರಿಗಳ ಸಭೆಯನ್ನು ಏರ್ಪಡಿಸಿ ಪೋಷಕರು ಆರೋಪಿಸಿರುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಗುಣಮಟ್ಟದ ಆಹಾರ ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅರುಣ್ ಮಾಚಯ್ಯನವರು  ಸ್ಪಷ್ಟಪಡಿಸಿದ ನಂತರ ಪೋಷಕರು ಪ್ರತಿಭಟನೆಯನ್ನು ಕೈ ಕೈಬಿಟ್ಟ ಘಟನೆ ನಡೆದಿದೆ.

ಕಳೆದ ಒಂದು ವರ್ಷಗಳ ಹಿಂದೆ  ಕ್ರೀಡಾ ವಸತಿ ನಿಲಯದಲ್ಲಿ ಆಹಾರ ವಿತರಿಸುವ ಗುತ್ತಿಗೆಯನ್ನು ಹೆಚ್. ಚಿತ್ರ ಎಂಬುವರು ಪಡೆದಿದ್ದರು ಅವರ ಗುತ್ತಿಗೆ ಅವಧಿ ಮುಗಿದಿದ್ದರೂ ಕೂಡ ಕ್ರೀಡ ಇಲಾಖೆ ಟೆಂಡರ್ ಪ್ರಕ್ರಿಯೆಯನ್ನು ನಡೆಸಿದೆ ಇವರನ್ನೇ ಮುಂದುವರಿಸಿರುವುದು ಕೂಡ ಇದೀಗ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಕ್ರೀಡಾ ಇಲಾಖೆಯ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದವರು ಆಗಾಗ ಈ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಿರುವುದೇ ಈ ಎಲ್ಲಾ ಘಟನೆಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಅಧೀನದಲ್ಲಿ, ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಚಂದ್ರಕಲಾ, ಮುಖ್ಯ ಕಾರ್ಯದರ್ಶಿಗಳಾಗಿ ಆಗಿದ್ದಂತ ಬಲದೇವಕೃಷ್ಣ, ಜಿಲ್ಲಾ ಪಂಚಾಯತ್ ಸದಸ್ಯರಾದ ಅರುಣ್ ಮಾಚಯ್ಯನವರ ಪ್ರಯತ್ನದಿಂದ ಈ ಕ್ರೀಡಾ ವಸತಿ ನಿಲಯ ಪೊನ್ನಂಪೇಟೆ ಯಲ್ಲಿ ಸ್ಥಾಪಿಸಲು ಕಾರಣವಾಗಿ ಹಲವಾರು ಕ್ರೀಡಾಪಟುಗಳು ಇಂದು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಗಮನಿಸೆಳೆದು ವಿವಿಧ ಇಲಾಖೆ ಹಾಗೂ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರ, ಶಾಸಕ ಪೊನ್ನಣ್ಣನವರ ಪ್ರಯತ್ನದಿಂದ ಎರಡು ಅಂತಸ್ತಿನ ಕ್ರೀಡಾ ವಸತಿ ನಿಲಯ ಕಟ್ಟಡ ಕಾಮಗಾರಿಯೂ ಕೂಡ ಆರಂಭಗೊಂಡಿದೆ. ಕೇಂದ್ರ ಸರ್ಕಾರ ಇದನ್ನೇ ಮನದಟ್ಟು ಮಾಡಿಕೊಂಡು ಪೊನ್ನಂಪೇಟೆಯನ್ನು ಕೇಲೋ ಇಂಡಿಯಾ ತರಬೇತಿ ಕೇಂದ್ರವನ್ನಾಗಿ ಕೂಡ ಪರಿಗಣಿಸಿದೆ.  

ಜಿಲ್ಲಾ ಪಂಚಾಯತಿನ ಅಧೀನದಲ್ಲಿದ್ದ ಈ ವಿದ್ಯಾರ್ಥಿ ನಿಲಯ ಇದೀಗ ರಾಜ್ಯ ಕ್ರೀಡಾ ಇಲಾಖೆಯ ಅಧೀನಕ್ಕೆ ಒಳಪಟ್ಟು ರಾಜ್ಯದ ಬೇರೆ ಬೇರೆ ಕಡೆಯಿಂದ ವಿದ್ಯಾರ್ಥಿಗಳು ಆಯ್ಕೆಗೊಂಡು ಈ ಕ್ರೀಡಾ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ತರಬೇತಿಯನ್ನು ಪಡೆಯುತ್ತಿದ್ದಾರೆ. ಆದರೆ ಸೋಜಿಗ ವಿಚಾರವೆಂದರೆ ಪೌಷ್ಟಿಕ ಆಹಾರದ ವಿತರಣೆಯಲ್ಲಿ ಇಲ್ಲಿ ಇಲಾಖೆಯ ಬೇಜವಾಬ್ದಾರಿಯಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಆಹಾರ ದೊರಕುತ್ತಿಲ್ಲ ಎಂಬ ಕೂಗು ಹಲವು ದಿನಗಳಿಂದ ಕೇಳಿ ಬರುತ್ತಿದ್ದು ಇದೀಗ ಪೋಷಕರು ತಮ್ಮ ಹಕ್ಕನ್ನು ಪ್ರತಿಪಾದಿಸಿ ಇಂದು ಶುಕ್ರವಾರ ಸಂಜೆ  ಪ್ರತಿಭಟನೆ ನಡೆಸಿದ್ದಾರೆ.


Share: