ಮಡಿಕೇರಿ.
ಕೊಡಗು ಪತ್ರಿಕಾ ಭವನದ ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ಹಿರಿಯ ಪತ್ರಕರ್ತರು, ಕೊಡಗು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರು, ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಖಂಡರಾದ ಟಿ.ಪಿ ರಮೇಶ್ ರವರ ಮಾತೃಶ್ರೀ ರವರಾದ ತೆಲುಗು ಬಲಜಿಗರ ಸರೋಜಮ್ಮ(90) ಇಂದು ರಾತ್ರಿ 9 ಗಂಟೆಗೆ (ಭಾನುವಾರ) ಮಡಿಕೇರಿಯಲ್ಲಿ ಅನಾರೋಗ್ಯದಿಂದ ನಿದನರಾಗಿರುತ್ತಾರೆ.
ಮಡಿಕೇರಿಯ ಸೇಂಟ್ ಜೋಸೆಫ್ ಕಾನ್ವೆಂಟ್ ಸಮೀಪವಿರುವ ಟಿ.ಪಿ ರಮೇಶ್ ರವರ ಮನೆಯಲ್ಲಿ ಅಂತಿಮ ದರ್ಶನಕ್ಕಾಗಿ ಮೃತ ದೇಹ ಇಡಲಾಗಿದ್ದು,
ಮೃತರ ಅಂತಿಮ ಸಂಸ್ಕಾರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.