One Tap News - Kannada News Daily

Header
collapse
...
Home / State News / ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ನೇಮಕ

ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ನೇಮಕ

2026-01-07  Bangalore  143 views
ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ನೇಮಕ

 

ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ನೇಮಕ

ಬೆಂಗಳೂರು. 

ಬೆಂಗಳೂರಿನ ಜೆ.ಪಿ.ಭವನದಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆ. 

ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆ

ಅರಕಲಗೂಡು ಶಾಸಕ ಎ.ಮಂಜು, ಮಾಜಿ ಎಂಎಲ್ಸಿ ತಿಪ್ಪೆಸ್ವಾಮಿ, ನಾಡಗೌಡ, ಶಾಸಕರಾದ ಶರಣಗೌಡ ಕಂದಾಕೂರ್. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮತ್ತೀತರ ಮುಖಂಡರು ಕೋರ್ ಕಮಿಟಿ ಸಭೆಯಲ್ಲಿ ಭಾಗಿ

ಸಭೆಯಲ್ಲಿ ಕೊಡಗು ಜಿಲ್ಲಾಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಅವರ ನೇಮಕ. 

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸುವ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಪಕ್ಷವನ್ನು ಸಂಘಟಿಸುವ   ಜವಾಬ್ದಾರಿಯನ್ನು ಸುಬ್ಬಣ್ಣ ಅವರಿಗೆ ವಹಿಸಿದ ಕೋರ್ ಕಮಿಟಿ 

ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆಗೆ ಜಿಲ್ಲೆಯಿಂದ  ಜೆಡಿಎಸ್ ಪಕ್ಷದ  ಕೊಡಗು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ. ಜಾಶೀರ್,  ಪೊನ್ನಂಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ  ಕೊತೂರು ಸುರೇಶ್, ಸೋಮವಾರಪೇಟೆ ಯುವ ಜೆಡಿಎಸ್ ಅಧ್ಯಕ್ಷ ಪ್ರವೀಣ್, ಗಿರೀಶ್ ಕುಶಾಲನಗರ ಮತ್ತು ಲೋಹಿತ್ ಗೌಡ,  ನವೀನ್  ಸೇರಿದಂತೆ ಮತ್ತೀತರರು ತೆರಳಿದ್ದರು

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಕಾರ್ಮಾಡು ಸುಬ್ಬಣ್ಣ ಅವರು ಮಾತನಾಡಿ ಪಕ್ಷದ ವರಿಷ್ಠರ ತೀರ್ಮಾನದಂತೆ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ತಮ್ಮನ್ನು ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ನೇಮಿಸಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.  ಜೆಡಿಎಸ್ ಪಕ್ಷದ ವರಿಷ್ಠರು ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಪ್ರಬಲವಾಗಿ ಸಂಘಟಸಿ, ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರಲ್ಲದೇ, ಕೂಡಲೇ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳನ್ನು ನೇಮಿಸಲಾಗುವುದೆಂದರು. 


Share: