One Tap News - Kannada News Daily

Header
collapse
...
Home / Kodagu / ಹಿರಿಯ ಸಹಕಾರಿ ಎಂ.ಎನ್.ಕುಮಾರಪ್ಪ ಅಗಲಿಕೆ ಬಡವಾಯಿತು ಕೊಡಗು ಸಹಕಾರ ರಂಗ.

ಹಿರಿಯ ಸಹಕಾರಿ ಎಂ.ಎನ್.ಕುಮಾರಪ್ಪ ಅಗಲಿಕೆ ಬಡವಾಯಿತು ಕೊಡಗು ಸಹಕಾರ ರಂಗ.

2026-01-13  Kodagu Desk  59 views
ಹಿರಿಯ ಸಹಕಾರಿ ಎಂ.ಎನ್.ಕುಮಾರಪ್ಪ ಅಗಲಿಕೆ   ಬಡವಾಯಿತು ಕೊಡಗು ಸಹಕಾರ ರಂಗ.

 

ಕುಶಾಲನಗರ. 

ಕುಶಾಲನಗರದ ಹಿರಿಯ ಸಹಕಾರಿ, ಭಾರತೀಯ ಜನತಾ ಪಕ್ಷದ ಹಿರಿಯ ಧುರೀಣ, ಸಾಧು ಸಜ್ಜನ ಮೂಲತಃ  ಕಲ್ಲೂರು ಗ್ರಾಮದವರಾದ ಕುಶಾಲನಗರದ ರಾಧಾಕೃಷ್ಣ ಬಡಾವಣೆಯಲ್ಲಿ ವಾಸವಿದ್ದ ಎಂ.ಎನ್.ಕುಮಾರಪ್ಪ ಮಂಗಳವಾರ ಅನಾರೋಗ್ಯ ದಿಂದಾಗಿ ನಿಧನ ಹೊಂದಿದರು. ಮೃತರಿಗೆ 76 ವರ್ಷ ವಯಸ್ಸಾಗಿತ್ತು.

ಕಳೆದ ಏಳು ವರ್ಷಗಳ ಹಿಂದೆ ಇವರ ಶ್ರೀಮತಿ ನಿಧನಗೊಂಡ ಬಳಿಕ ಪುತ್ರನೊಂದಿಗೆ ಇದ್ದರು.

ಸುಂಟಿಕೊಪ್ಪ  ಕೃಷಿ ಪತ್ತಿಮ ಸಹಕಾರ ಸಂಘದ ಅಧ್ಯಕ್ಷರಾಗಿ, ಕುಶಾಲನಗರದ ಎಪಿಸಿಎಂಎಸ್ ಅಧ್ಯಕ್ಷರಾಗಿ ಸುಧೀರ್ಘ ಅವಧಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಕುಶಾಲನಗರದ ರೈತ ಭವನದ ನಿರ್ಮಾತೃವಾಗಿದ್ದ ಇವರು, ರೈತ ಭವನದ ಪ್ರತೀ ಕಾಮಗಾರಿಯನ್ನು ದಿನವಹಿ ಖುದ್ದು ಪರಿಶೀಲಿಸುತ್ತಿದ್ದರು.

ಬೆಳಗ್ಗೆ ಮನೆ ಬಿಟ್ಟರೆ, ಕಡತಗಳಿಗೆ ಸಹಿ ಇದ್ದರೆ  ಎಪಿಸಿಎಂಎಸ್ ನಲ್ಲಿ  ಕೆಲಕಾಲ, ಉಳಿದ ಹಲವು ಕಾಲ ರೈತ ಭವನದ ಬಳಿಯೇ ಇರುತ್ತಿದ್ದರು.

ಈ ಮಧ್ಯೆ ಬಿಡುವಿನ ಇಳಿ ಸಂಜೆಯ ಹೊತ್ತಿನಲ್ಲಿ  ಬಿಜೆಪಿ ಕಟ್ಟಾಳು ಐಬಿ ರಸ್ತೆಯ ವಿನಾಯಕ ಕಾಂಪ್ಲೆಕ್ಸ್ ಮಾಲೀಕರಾದ ಎಂ.ವಿ.ನಾರಾಯಣ ಅವರ ಕಛೇರಿಯಲ್ಲಿ ಅವರ ಸಮಾನರೊಂದಿಗೆ ಪಕ್ಷದ ಚಟುವಟಿಕೆ, ಸಂಘಟನೆ ಬಗ್ಗೆ ಚರ್ಚಿಸುತ್ತಿದ್ದರು.

ಕಳೆದ  ಎಂಎಲ್ ಎ ಚುನಾವಣೆಯಲ್ಲಿ  ಅಪ್ಪಚ್ಚು ಸೋಲಿನ ಬಳಿಕ ಒಂದಷ್ಟು ಮಾನಸಿಕವಾಗಿ ಬಳಲಿದ್ದ ಅವರು, 

ಹೀಗೆ  ಕೆಲವೇ ತಿಂಗಳ ಹಿಂದಷ್ಟೇ ನಡೆದ ಎಪಿಸಿಎಂಎಸ್ ಚುನಾವಣೆಯಲ್ಲಿ ಇವರ  ಪ್ರಾಮಾಣಿಕ ಆಡಳಿತದ ಫಲದಿಂದಾಗಿ ಬಿಜೆಪಿ ಬಹುಮತಗಳಿಸಿ ಅಧಿಕಾರಕ್ಕೆ ಮತ್ತೆ ಏರಿದ್ದನ್ನು ಸ್ಮರಿಸಬಹುದು.

ಅನಾರೋಗ್ಯದ  ಕಾರಣದಿಂದಾಗಿ ಕಳೆದ ಕೆಲ ದಿನಗಳ ಹಿಂದಷ್ಟೇ ಎಪಿಸಿಎಂಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಇದೀಗ ಇವರ ಅಗಲಿಕೆಯಿಂದಾಗಿ ಕೊಡಗು ಹಾಗೂ ಕುಶಾಲನಗರದ ಸಹಕಾರ ರಂಗ ಓರ್ವ ಪ್ರಾಮಾಣಿಕ ಹಾಗೂ ಸಜ್ಜನ ಸಹಕಾರಿಯನ್ನು ಕಳೆದುಕೊಂಡಿದೆ.

ಈ ದಿನ  ರಾತ್ರಿಯವರೆಗೂ ಕುಶಾಲನಗರದ ರಾಧಾಕೃಷ್ಣ ಬಡಾವಣೆಯ ಅವರ ನಿವಾಸದಲ್ಲಿ ಅಂತಿಮ ದರ್ಶನದ ಬಳಿಕ ಬುಧವಾರ ಬೆಳಗ್ಗೆ ಸ್ವಗ್ರಾಮ ಕಲ್ಲೂರು ತೋಟದ ಮನೆಗೆ ಕೊಂಡೊಯ್ದು ಅಂತಿಮ ವಿಧಿಗಳನ್ನು ನಡೆಸುವ ಕುರಿತು ಕುಟುಂಬ ಮೂಲಗಳು ತಿಳಿಸಿವೆ.


Share: