ತಿತಿಮತಿ.
ಕಾಡಾನೆಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಲು ಅರಣ್ಯ ಅಧಿಕಾರಿಗಳು ವಿಫಲ, ಅತಿಯಾದ ಸಂರಕ್ಷಣೆ ಸಮಸ್ಯೆಗೆ ಕಾರಣ- ಸಂಸದ ಯದುವೀರ್ ಒಡೆಯರ್
ಸಂಸದ ಯದುವೀರ್ ಒಡೆಯರ್ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿ, ಕೊಯಂಬತ್ತೂರು ಫಾರೆಸ್ಟ್ ಇನ್ಸ್ಟಿಟ್ಯೂಟ್ ಹಾಗೂ ಅನೇಕ ತಜ್ಞರ ತಂಡಗಳು ಕೊಡಗಿನಲ್ಲಿ ಕಾಫಿ ತೋಟಗಳಲ್ಲಿರುವ ಆನೆಗಳ ಸಂಶೋಧನೆ ನಡೆಸಿ ಅರಣ್ಯದಲ್ಲಿರುವ ಆನೆಗಳು ಹಾಗೂ ತೋಟಗಳಲ್ಲಿರುವ ಆನೆಗಳ ತಳಿಗಳಲ್ಲಿ ವ್ಯತ್ಯಾಸಗಳನ್ನು ಅಧ್ಯಯನ ನಡೆಸಿ ಸುಮಾರು 200 ಆನೆಗಳನ್ನು ಗುರುತಿಸಿ, ಸೂಕ್ತ ಪುನರ್ವಸತಿ ಕಲ್ಪಿಸುವಂತೆ ವರದಿ ನೀಡಿದೆ. ವರದಿ ಅನುಷ್ಟಾನಕ್ಕೆ ಹಿಂದೇಟು ಹಾಕುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಬೇಕಿದೆ. ಅತಿಯಾದ ಸಂರಕ್ಷಣಾ ಕ್ರಮಗಳಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿ ಜನತೆ ಬದುಕು ಸಾಗಿಸುವುದು ಕಷ್ಟವಾಗಿದೆ ಎಂದರು.