One Tap News - Kannada News Daily

Header
collapse
...
Home / National News / ವಿಶಾಲ್ ಉತ್ತಪ್ಪ ಹಾಗೂ ಹನ್ಸಿಕ ರಾಕೇಶ್ ಗೆ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ

ವಿಶಾಲ್ ಉತ್ತಪ್ಪ ಹಾಗೂ ಹನ್ಸಿಕ ರಾಕೇಶ್ ಗೆ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ

2026-06-06  Bangalore  14 views
ವಿಶಾಲ್ ಉತ್ತಪ್ಪ ಹಾಗೂ ಹನ್ಸಿಕ ರಾಕೇಶ್ ಗೆ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ

ಬೆಂಗಳೂರು. 

ಕರ್ನಾಟಕ ರಾಜ್ಯದ ಶ್ರೇಯಾಂಕಿತ ಆಟಗಾರರಾದ ಕೊಡಗಿನ ವಿಶಾಲ್ ಉತ್ತಪ್ಪ ಹಾಗೂ ಮೈಸೂರಿನ ಹನ್ಸಿಕಾ ರಾಕೇಶ್ ಹೈದರಾಬಾದಿನ ಕೊಟಕ್ ಫುಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ನಡೆದ ತೆಲಂಗಾಣ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಬ್ಯಾಡ್ಮಿಂಟನ್

ಅಸೋಸಿಯೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ತಾರೀಕು 29 ಮೇ ಇಂದ 6 ಜೂನ್ ವರೆಗೆ ನಡೆದ ರಾಷ್ಟ್ರಮಟ್ಟದ 15 ವರ್ಷದೊಳಗಿನ ಮಿಶ್ರ ಡಬಲ್ಸ್ ನಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿರುತ್ತಾರೆ. ಭಾರತದ ಆರನೇ ಶ್ರೇಯಾಂಕಿತ ಆಟಗಾರರಾದ ಇವರು ಟೂರ್ನಿಯಲ್ಲಿ ಸಿಂಗಲ್ಸ್ ನಲ್ಲೂ ಉತ್ತಮ ಪ್ರದರ್ಶನ ನೀಡಿರುತ್ತಾರೆ .

ಇವರಿಬ್ಬರೂ ಹೈದರಾಬಾದಿನ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.


Share: