One Tap News - Kannada News Daily

Header
collapse
...
Home / Kodagu / ಬಡವರಿಗೆ 43 ಮನೆ ಹಸ್ತಾಂತರಿಸಿದ ಶಾಸಕ ಎ. ಎಸ್ ಪೊನ್ನಣ್ಣ.

ಬಡವರಿಗೆ 43 ಮನೆ ಹಸ್ತಾಂತರಿಸಿದ ಶಾಸಕ ಎ. ಎಸ್ ಪೊನ್ನಣ್ಣ.

2026-06-05  Kodagu Desk  58 views
ಬಡವರಿಗೆ 43 ಮನೆ ಹಸ್ತಾಂತರಿಸಿದ ಶಾಸಕ ಎ. ಎಸ್ ಪೊನ್ನಣ್ಣ.

ವಿರಾಜಪೇಟೆ. 

ವಿರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಸುಮಾರು 7.5 ಎಕರೆ ಜಾಗದಲ್ಲಿ ಸರಕಾರದ ವತಿಯಿಂದ ನಿರ್ಮಿಸಿದ ಬಡಾವಣೆಯ, 60 ಮನೆಗಳ ಪೈಕಿ ಇಂದು 43 ಮನೆಗಳ ಕೀ ಹಸ್ತಾಂತರ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

1002501188.jpg

   ತಾವು ಶಾಸಕರಾಗಿ ಆಯ್ಕೆಯಾದ ಕೂಡಲೇ ಇಲ್ಲಿನ ನಿವಾಸಿಗಳ ಬೇಡಿಕೆಗೆ ಅಂದು ಸ್ಪಂದಿಸಿದ್ದ ಮಾನ್ಯ ಶಾಸಕರು, ಇದೇ ಜಾಗದಲ್ಲಿ ಉತ್ತಮ ಮೂಲಭೂತ ಸೌಕರ್ಯವಿರುವ ಬಡಾವಣೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಆ ಪ್ರಯುಕ್ತ ಮಾನ್ಯ ಶಾಸಕರು ಸರಕಾರದಿಂದ ವಿಶೇಷ ಅನುದಾನ ತಂದು ಇಲ್ಲಿಯ ಎಲ್ಲಾ ನಿವಾಸಿಗಳಿಗೆ ಸೂರು ನೀಡುವುದರೊಂದಿಗೆ ಉತ್ತಮ ಮೂಲಭೂತ ಸೌಲಭ್ಯಕ್ಕೆ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಿದ್ದರು.

1002501187.jpg

 ಇಂದಿನ ಕಾರ್ಯಕ್ರಮದಲ್ಲಿ ಕೀ ಹಸ್ತಾಂತರಿಸುತ್ತ ಶುಭ ಕೋರಿದ ಮಾನ್ಯ ಶಾಸಕರು, ಎಲ್ಲರೂ ಉತ್ತಮ ಜೀವನ ನಡೆಸುವುದರೊಂದಿಗೆ ಮಕ್ಕಳ ವಿದ್ಯಾಭ್ಯಾಸದ ಕಡೆಗೂ ಗಮನ ನೀಡಿ ಅವರ ಭವಿಷ್ಯ ಉಜ್ವಲಗೊಳ್ಳುವಂತೆ ನೋಡಿಕೊಳ್ಳಬೇಕು. ಸರಕಾರ ನೀಡಿದ ಈ ವ್ಯವಸ್ಥೆಯ ಸದುಪಯೋಗವನ್ನು ಪಡಿಸಿಕೊಂಡು ಎಲ್ಲರೂ ಉತ್ತಮ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.

1002501186.jpg

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಉಪಾಧ್ಯಕ್ಷರು ಪಂಕಜ, ಬ್ಲಾಕ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಬ್ಲಾಕ್ ಮಹಿಳಾ ಉಪಾಧ್ಯಕ್ಷೆ ಕಾಳಮಾಂಡ ನಯನ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಜಾನ್ಸನ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರು ಹನೀಫ್, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷರು ರಫೀಕ್, ವಲಯ ಅಧ್ಯಕ್ಷರು ನಡಿಕೇರಿಯಂಡ ಮಹೇಶ್, ಪಂಚಾಯತ್ ಮಾಜಿ ಅಧ್ಯಕ್ಷರು ಜೇಫ್ರಿಉತ್ತಪ್ಪ, ಪಂಚಾಯಿತಿ ಮಾಜಿ ಸದಸ್ಯರು ಇಸ್ಮಾಯಿಲ್, ಮಾಜಿ ಪುರಸಭೆ ಅಧ್ಯಕ್ಷರು ದೇಚಮ್ಮ, ಪಕ್ಷದ ಮುಖಂಡರು ಸೂರಜ್ ಹೊಸೂರು, ಜೋಕಿಮ್, ನರೇಂದ್ರ ಕಾಮತ್, ಬೇಬಿ, ಮಂಜುನಾಥ್, ಇಸ್ಮಾಯಿಲ್, ಜಲಿಲ್, ಕರಿನೆರವಂಡ ಮಿಟ್ಟು ಅಯ್ಯಪ್ಪ, ಕರಿನೆರವಂಡ ಜಿತನ್, ಮಾಳೇಟೀರ ಸುಬ್ಬಯ್ಯ, ತಹಶೀಲ್ದಾರ್ ಪ್ರವೀಣ್, ಐಟಿಡಿಪಿ ಇಲಾಖೆಯ ಅಧಿಕಾರಿಗಳಾದ ಹೊನ್ನೇಗೌಡ, ಫಲಾನುಭವಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.


Share: