ವಿರಾಜಪೇಟೆ.
ಇತ್ತೀಚೆಗೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆ ನಿವಾಸಿ ಅಣ್ಣಪ್ಪ ರವರಿಗೆ ಗಂಟಲಿನಲ್ಲಿ ಊತ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಚಿಕಿತ್ಸೆ ನೀಡಲು ಮೈಸೂರಿನ ಖಾಸಗಿ ಆಸ್ಪತ್ರೆ ಗೆ ಪರೀಶಿಲನೆಗೆ ಕರೆದುಕೊಂಡು ಹೋದಾಗ ಅಣ್ಣಪ್ಪ ಅವರ ಗಂಟಲಿನಲ್ಲಿ ಕ್ಯಾನ್ಸರ್ ಗೆಡ್ಡೆ ಬೆಳದ್ದಿದ್ದು ಶಸ್ತ್ರಚಿಕಿತ್ಸೆ ಮಾಡಲೇ ಬೇಕಾದ ಅನಿವಾರ್ಯತೆ ಉಂಟಾಯಿತು.
ಶಸ್ತ್ರಚಿಕಿತ್ಸೆ ಗೆ ಸುಮಾರು ಅಂದಾಜು ಎಂಟು ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಅಲ್ಲಿನ ವೈದ್ಯರು ಮಾಹಿತಿ ನೀಡಿದರು.
ತಕ್ಷಣ ಅಣ್ಣಪ್ಪ ಸಹೋದರ ಮಣಿಕಂಟ ಅವರು ಸ್ಥಳಿಯ ಕಾಂಗ್ರೆಸ್ ಮುಖಂಡರಿಗೆ ಮಾಹಿತಿ ನೀಡಿ ಶಾಸಕ ಪೊನ್ನಣ್ಣ ಅವರ ಮೊರೆ ಹೋಗಿದ್ದು ತಕ್ಷಣ ವೇ ಆಸ್ಪತ್ರೆಯ ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ ಶಸ್ತ್ರಚಿಕಿತ್ಸೆ ಮಾಡುವಂತೆ ಸೂಚಿಸಿದ್ದಾರೆ ಶಸ್ತ್ರಚಿಕಿತ್ಸೆ ಗೆ ಬೇಕಾದ ಹಣವನ್ನು ಆಯ್ಯಶ್ಮಾನ್ ಭಾರತ ಅರೋಗ್ಯ ಕರ್ನಾಟಕ ಯೋಜನೆ ಯ ಮುಖಾಂತರ ಹಣವನ್ನು ಪಾವತಿ ಮಾಡಲು ತಿಳಿಸಿದರು.
ಶಾಸಕರ ಆಪ್ತರಾದ ಚೋಕಂಡ ಸಂಜು ಸುಬ್ಬಯ್ಯ ಅವರಿಗೆ ಈ ಚಿಕಿತ್ಸೆ ಯ ಸಂಪೂರ್ಣ ಜವಾಬ್ದಾರಿ ನೀಡಿದರು.
ಸಂಜು ಸುಬ್ಬಯ್ಯ ಅವರು ಅಣ್ಣಪ್ಪ ಅವರ ಶಸ್ತ್ರಚಿಕಿತ್ಸೆ ಯಾಗಿ ಅವರನ್ನು ಮರಳಿ ಕರೆದುಕೊಂಡು ಬರುವವರೆಗೂ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಅಣ್ಣಪ್ಪ ಅವರನ್ನು ತನ್ನ ಮನೆಗೆ ಸೇರಿಸುವ ಲ್ಲಿ ಯಶಸ್ವಿಯಾದರು.
ಇಂದು ಅಣ್ಣಪ್ಪ ಕುಟುಂಬದ ಎಲ್ಲಾ ಸದಸ್ಯರು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ವಿರಾಜಪೇಟೆ ನಿವಾಸಕ್ಕೆ ಆಗಮಿಸಿ ಕೃತಜ್ಞತೆ ಸಲ್ಲಿಸಿದರು.
ಅಣ್ಣಪ್ಪ ಅವರ ಕುಟುಂಬಕ್ಕೆ ಧೈರ್ಯ ತುಂಬಿದ ಶಾಸಕರು ಅಣ್ಣಪ್ಪ ಅವರ ಐದು ತಿಂಗಳ ಮಗು ವನ್ನು ಎತ್ತಿಕೊಂಡು ಮುದ್ದಿಸಿ ವಯ್ಯಕ್ತಿಕ ಧನಸಹಾಯ ನೀಡಿದರು.
ಈ ಸಂದರ್ಭದಲ್ಲಿ ಅಣ್ಣಪ್ಪ ಅವರ ಪತ್ನಿ ಹಾಗೂ ಚೆನ್ನಯನ ಕೋಟೆಯ ಕಾಂಗ್ರೆಸ್ ಕಾರ್ಯಕರ್ತರಾದ ಮನು,ರವೀಂದ್ರ ಬಾವೆ,ಪ್ರಕಾಶ್ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.