ವಿರಾಜಪೇಟೆ.
ಬಿಹಾರ ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ವಿರಾಜಪೇಟೆ ನಗರದ ಗಡಿಯಾರ ಕಂಬದ ಬಳಿಯಲ್ಲಿ ವಿಜಯೋತ್ಸವ.
ವಿರಾಜಪೇಟೆ ನಗರ ಬಿಜೆಪಿ ಅದ್ಯಕ್ಷರಾದ ಅನಿಲ್ ಮಂದಣ್ಣ ಅವರ ಅದ್ಯಕ್ಷತೆಯಲ್ಲಿ ನಡೆಯಿತು.
ವಿರಾಜಪೇಟೆ ನಗರದ ನೂರಾರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ರಾಜ್ಯ ಮಹಿಳಾ ಘಟಕದ ಬಿಜೆಪಿ ಸದಸ್ಯರಾದ ಪಟ್ಟಡ ರೀಣಾ ಪ್ರಕಾಶ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಜನ ಮೆಚ್ಚಿದ ಕಾರ್ಯಕ್ರಮಗಳು ಬಿಹಾರ ಜನತೆಗೆ ವರದಾನವಾಗಿದೆ ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಕಡೆಗಳಲ್ಲಿ ಬಿಜೆಪಿ ಪಕ್ಷದ ಸದಸ್ಯರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ ರಾಹುಲ್ ಗಾಂಧಿಯವರ ವೋಟ್ ಚೋರಿ ಪ್ರಕರಣ ಬಿಹಾರ್ ಚುನಾವಣಾ ಸಂದರ್ಭದಲ್ಲಿ ನೀಡಿದ ಹೇಳಿಕೆ ಯಾವುದೇ ಪ್ರಯೋಜನ ನಡೆಯಲಿಲ್ಲ ಎಂದು ತಿಳಿಸಿದರು ಮುಂದೆ ಕರ್ನಾಟಕ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ನೆಲಕಚ್ಚಲಿದೆ ಎಂದು ತಿಳಿಸಿದರು.
ವಿಜಯೋತ್ಸವದಲ್ಲಿ ಬಿಜೆಪಿ ಒಬಿಸಿ ಅದ್ಯಕ್ಷರಾದ ಸುರೇಶ್. ಬಿಜೆಪಿ ಮುಖಂಡರಾದ ರಘು ನಾಣಯ್ಯ, ಬಿ.ಡಿ.ಸುನೀತಾ, ಸಾಯಿನಾಥ್ ನಾಯ್ಕ, ಆನಂದ ನಂಜಪ್ಪ, ಶಂಕರ್, ಸಚ್ಚಿನ್, ಶಿವು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು..