One Tap News - Kannada News Daily

Header
collapse
...
Home / Kodagu / ರಾಜ್ಯ ಹೆದ್ದಾರಿ ಬಿಟ್ಟಂಗಾಲದಲ್ಲಿ ಹುಣಸೂರಿನ ವಾಹನದಲ್ಲಿ, ತ್ಯಾಜ್ಯಗಳ ವಿಲೇವಾರಿ. ಪಂಚಾಯಿತಿಯಿಂದ 10,000 ದಂಡ ವಸೂಲಿ

ರಾಜ್ಯ ಹೆದ್ದಾರಿ ಬಿಟ್ಟಂಗಾಲದಲ್ಲಿ ಹುಣಸೂರಿನ ವಾಹನದಲ್ಲಿ, ತ್ಯಾಜ್ಯಗಳ ವಿಲೇವಾರಿ. ಪಂಚಾಯಿತಿಯಿಂದ 10,000 ದಂಡ ವಸೂಲಿ

2025-10-16  Kodagu Desk  94 views

 

ವಿರಾಜಪೇಟೆ. 
ಹುಣಸೂರಿನಿಂದ ಪಪ್ಪಾಯಿಯನ್ನು ಕೇರಳಕ್ಕೆ ತುಂಬಿಸಿಕೊಂಡು ಹೊಗಿದ ಅಶೋಕ್ ಲೈಲ್ಯಾಂಡ್ ವಾಹನ ಒಂದು ಹಿಂತುರುಗಿ ಬರುವಾಗ ಅದರ ತ್ಯಾಜ್ಯಗಳನ್ನು ಬಿಟ್ಟಂಗಾಲದ ರಸ್ತೆ ಬದಿಯಲ್ಲಿ  ಸುರಿಯುತ್ತಿದ್ದಾಗ, ಸಾರ್ವಜನಿಕರು ಈ ವಾಹನವನ್ನು ಗಮನಿಸಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ದೂರು ನೀಡಿದ ಅನ್ವಯ ಗ್ರಾಮ ಪಂಚಾಯಿತಿ ಈತನಿಗೆ 10,000 ದಂಡವನ್ನು ವಿಧಿಸಿ, ತ್ಯಾಜ್ಯವನ್ನು ಮತ್ತೆ ವಾಹನಕ್ಕೆ ತುಂಬಿಸಿ ಕಳಿಸಿರುವ ಘಟನೆ ಇಂದು ಸಂಜೆ ನಡೆದಿದೆ. 


ಕೊಡಗಿನ ಎಲ್ಲಾ ಭಾಗದಲ್ಲೂ ಇದೇ ರೀತಿ ಸಾರ್ವಜನಿಕರು ಎಚ್ಚೆತ್ತುಕೊಂಡು ತ್ಯಾಜ್ಯವನ್ನು ಕಂಡಲ್ಲಿ ಬಿಸಾಕುವವರನ್ನು ಪತ್ತೆ ಹಚ್ಚಿ ಗ್ರಾಮ ಪಂಚಾಯಿತಿ ಅಥವಾ ಪೊಲೀಸರಿಗೆ ಸುದ್ದಿ ಮುಟ್ಟಿಸಿ ದಂಡ ವಿಧಿಸಿದರೆ ಒಂದಿಷ್ಟು ಹೊರ ಜಿಲ್ಲೆಯ ಹೊರ ರಾಜ್ಯದ  ತ್ಯಾಜ್ಯಗಳ ಸಂಖ್ಯೆ ಕೊಡಗಿನಲ್ಲಿ ವಿಲೇವಾರಿಯಾಗುವುದ್ದನ್ನು ತಪ್ಪಿಸಬಹುದಾಗಿದೆ.


Share: