One Tap News - Kannada News Daily

Header
collapse
...
Home / Kodagu / ಶ್ರೀ ರಾಮ ಭಕ್ತರ ಬಳಗ ವಿರಾಜಪೇಟೆ ಇವರ ವತಿಯಿಂದ ಎರಡನೇ ವರ್ಷದ ರಕ್ತದಾನ ಶಿಬಿರ.

ಶ್ರೀ ರಾಮ ಭಕ್ತರ ಬಳಗ ವಿರಾಜಪೇಟೆ ಇವರ ವತಿಯಿಂದ ಎರಡನೇ ವರ್ಷದ ರಕ್ತದಾನ ಶಿಬಿರ.

2025-10-24  Kodagu Desk  167 views
ಶ್ರೀ ರಾಮ ಭಕ್ತರ ಬಳಗ ವಿರಾಜಪೇಟೆ ಇವರ ವತಿಯಿಂದ ಎರಡನೇ ವರ್ಷದ ರಕ್ತದಾನ ಶಿಬಿರ.

 

ವಿರಾಜಪೇಟೆ. 

ಶ್ರೀ ರಾಮ ಭಕ್ತರ ಬಳಗ ವಿರಾಜಪೇಟೆ ಇವರ ವತಿಯಿಂದ ಎರಡನೇ ವರ್ಷದ ರಕ್ತದಾನ ಶಿಬಿರ.


ಇಂದು ವಿರಾಜಪೇಟೆ ಪುರಸಭೆ ಸಭಾಂಗಣದಲ್ಲಿ ನಡೆದ ರಕ್ತ ದಾನ ಶಿಬಿರದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ರಕ್ತ ದಾನ ಮಾಡಿದರು.

1001778300.jpg


ಸಂಘದ ಅಧ್ಯಕ್ಷರಾದ ಬಿ.ಎಂ.ಕುಮಾರ್ ಅವರು ಮಾತನಾಡಿ ರಕ್ತ ದಾನ ಶ್ರೇಷ್ಠ ದಾನ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ. ಮಾನವರಿಗೆ  ಮಾನವರೆ ರಕ್ತ ದಾನ ಮಾಡಬೇಕು, ಎರಡನೇ ಬಾರಿಗೆ ನಮ್ಮ ಮಹಿಳಾ  ಸದಸ್ಯರಾದ ಸಂದ್ಯ ರಂಜನ್, ಅದೀತ ಮುತ್ತಮ್ಮ,ಹಾಗೂ ಹತ್ತೊಂಬತ್ತನೆಯ ಬಾರಿ ವಿರಾಜಪೇಟೆ ಮನೋಜ್,  ನಲವತ್ತಾರು ಬಾರಿ ರಕ್ತ ದಾನ ಮಾಡಿದ ಸ್ನೇಕ್ ಸತೀಶ್, ಸೇರಿದಂತೆ ಹಲವಾರು ಮಂದಿ ರಕ್ತ ದಾನ ಮಾಡಿದರು ಅವರಿಗೆ ಅಭಿನಂದನೆ ಸಲ್ಲಿಸಿದರು. 

  ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಇದೆ. ಶಸ್ತ್ರಚಿಕಿತ್ಸೆ ಸಮಯದಲ್ಲಿ ನಾವು ನೀಡುವ ರಕ್ತದಲ್ಲಿ ಅನೇಕ ಪ್ರಾಣವನ್ನು ಉಳಿಸಬಹುದು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಬಳಗ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಸದಸ್ಯರಾದ ವಿವೇಕ್ ರೈ, ದಿನೇಶ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


Share: