ವಿರಾಜಪೇಟೆ.
ಕಸ ಬಿಸಾಕುವ ಜಾಗದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಕೆ ಪುರಸಭೆ ಅದ್ಯಕ್ಷರಾದ ಎಂ.ಕೆ ದೇಚಮ್ಮ ಅವರು ಮಹತ್ವದ ಹೆಜ್ಜೆ.
ಅನೇಕ ವರ್ಷದ ಹಿಂದೆ ವಿರಾಜಪೇಟೆ ನಗರ ಸ್ವಚ್ಚತೆಯಲ್ಲಿ ರಾಜ್ಯದಲ್ಲೆ ನಾಲ್ಕನೇ ಸುಂದರ ಪಟ್ಟಣ ಎಂದು ಹೆಸರು ಮಾಡಿತ್ತು.
ಇತ್ತೀಚಿನ ದಿನಗಳಲ್ಲಿ ಇಲ್ಲಿನ ಕೆಲವು ನಿವಾಸಿಗಳು ಎಲ್ಲೆಂದರಲ್ಲಿ ಕಸವನ್ನು ಎಸೆದು ನಗರದ ಪ್ರಮುಖ ಸ್ಥಳಗಳಲ್ಲಿ ಗಲಿಜು ಮಾಡುತ್ತಿದ್ದರು.
ಇತ್ತೀಚಿಗೆ ನಡೆದ ಪುರಸಭೆ ಸಭೆಯಲ್ಲಿ ಕಸ ಬಿಸಾಕುವ ವ್ಯಕ್ತಿಗಳ ಮೇಲೆ ಕ್ರಮವನ್ನು ಕೈಗೊಳ್ಳಬೇಕು ಅಲ್ಲದೆ ದಂಡವನ್ನು ವಿಧಿಸಬೇಕು ಎಂದು ನಿರ್ಧಾರ ಕೈಗೊಂಡ್ಡಿತ್ತು.
ಆದರೂ ಕೆಲವು ಪ್ರಮುಖ ಸ್ಥಳಗಳಾದ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ, ದೊಡ್ಡಟ್ಟಿ ಚೌಕಿ, ಎಪ್.ಎಂ.ಸಿ.ರಸ್ತೆ, ಮೊಗರಗಲ್ಲಿ, ಹರಿಕೇರೆಗಳಲ್ಲಿ ರಾತ್ರಿ ವೇಳೆ ಹಾಗೂ ಬೆಳಗಿನ ಜಾವ ಕಸವನ್ನು ಎಸೆಯುತ್ತಿದ್ದರು. ಅಂತವರ ಪತ್ತೆ ಹಚ್ಚಲು ಪುರಸಭೆ ಅದ್ಯಕ್ಷರಾದ ಎಂ.ಕೆ ದೇಚಮ್ಮ ಅವರು ಅಂತಹ ಸ್ಥಳ ದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲು ಸೂಚಿಸಿದರು. ಇಂದು ಪುರಸಭೆ ಅಭಿಯಂತರ ರೀತು ಸಿಂಗ್ ಅವರು ಮತ್ತು ಸಿಬ್ಬಂದಿ ಗಳು ಸಿ.ಸಿ.ಕ್ಯಾಮರಾ ಅಳವಡಿಸಿದ್ದಾರೆ.
ನಗರದ ಜನತೆ ಪುರಸಭೆ ಅದ್ಯಕ್ಷರಾದ ಎಂ.ಕೆ. ದೇಚಮ್ಮ ಅವರ ಈ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.