One Tap News - Kannada News Daily

Header
collapse
...
Home / Kodagu / ಹೇಮಂತ್ ‌ಕುಮಾರ್ ಎಂ.ಎನ್ ರವರಿಗೆ ಮೈಸೂರು ವಿವಿ ಯಿಂದ ಡಾಕ್ಟರೇಟ್

ಹೇಮಂತ್ ‌ಕುಮಾರ್ ಎಂ.ಎನ್ ರವರಿಗೆ ಮೈಸೂರು ವಿವಿ ಯಿಂದ ಡಾಕ್ಟರೇಟ್

2026-02-04  Kodagu Desk  25 views
ಹೇಮಂತ್ ‌ಕುಮಾರ್ ಎಂ.ಎನ್ ರವರಿಗೆ ಮೈಸೂರು ವಿವಿ ಯಿಂದ ಡಾಕ್ಟರೇಟ್

ವಿರಾಜಪೇಟೆ : 

ಮೈಸೂರಿನ ಕರ್ನಾಟಕ ‌ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿರಾಜಪೇಟೆಯ ಡಾ.ಹೇಮಂತ್ ಕುಮಾರ್ ಎಂ.ಎನ್ ಅವರಿಗೆ ಪಿಎಚ್ ಡಿ ಪದವಿಯ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ವಿರಾಜಪೇಟೆಯ ಸಂತ ಅನ್ನಮ್ಮ ಪದವಿ‌ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಹೇಮಂತ್ ‌ಕುಮಾರ್ ಎಂ.ಎನ್ ಅವರು 'ಕೊಡವ ಹಾಗೂ ತುಳು ಸಂಸ್ಕೃತಿಗಳ ತೌಲನಿಕ ಅಧ್ಯಯನ' ಎಂಬ ವಿಷಯದ ಕುರಿತು ಅಧ್ಯಯನ‌ ನಡೆಸಿ ಸಲ್ಲಿಸಿದ್ದ ಸಂಶೋಧನ ಮಹಾಪ್ರಬಂಧವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಅಂಗೀಕರಿಸಿ ಡಾಕ್ಟರೇಟ್ ಪದವಿಯನ್ನು ನೀಡಿತ್ತು. ಇವರಿಗೆ ಪ್ರೊ. ಕವಿತ ರೈ ಅವರು ಮಾರ್ಗದರ್ಶನ‌ ನೀಡಿದ್ದರು. ಡಾ. ಹೇಮಂತ್ ಕುಮಾರ್ ಅವರು ನಾರಾಯಣ್ ಶೆಟ್ಟಿ ಎಂ ಹಾಗೂ ಬಿ.ಎಸ್. ಕುಸುಮ ದಂಪತಿಗಳ ಪುತ್ರ.


Share: