ವಿರಾಜಪೇಟೆ.
ವಿರಾಜಪೇಟೆ ಮತ್ತು ಮಡಿಕೇರಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ, ಕೊಡಗು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮ ವಿರಾಜಪೇಟೆಯಲ್ಲಿ ನಡೆಯಿತು.
ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅದ್ಯಕ್ಷರಾದ ಬಾನಂಗಡ ಅರುಣ ಅವರು ಚೆಂಡೆ ಬಾರಿಸುವ ಮೂಲಕ ಜಾಥಗೆ ಚಾಲನೆ ನೀಡಿದರು.
ವಿರಾಜಪೇಟೆ ತೆಲುಗರ ಬೀದಿಯ ದಕ್ಷಿಣ ಮಾರಿಯಮ್ಮ ದೇವಾಲಯದಿಂದ ಮಹಿಳೆಯರು ಪೂರ್ಣ ಕುಂಬ ಸ್ವಾಗತ ದೊಂದಿಗೆ ಕಳಷವನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿಬಂದರು.

ಮೆರವಣಿಗೆಯಲ್ಲಿ ಮದ್ಯಪಾನದ ವಿರುದ್ಧ ದಿಕ್ಕಾರ ಹಾಗೂ ಕುಡಿತದಿಂದ ಆಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು.
ಮೆರವಣಿಗೆ ಯಲ್ಲಿ ಕೊಡಗು ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಕೂಡ ಭಾಗವಹಿಸಿದ್ದರು.

ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು ಮತ್ತು ಗಾಂಧಿಯವರ ಭಾವಚಿತ್ರಕ್ಕೆ ಮತ್ತು ಮಂಜುನಾಥೇಶ್ವರನ ಛಾಯಾಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಉದ್ಘಾಟನೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಮಾತನಾಡಿ ಧರ್ಮಸ್ಥಳ ಸಂಘ ಎಂದು ಆರಂಭ ಮಾಡಿದ ಡಾ: ವೀರೇಂದ್ರ ಹೆಗ್ಗಡೆಯವರ ಮಹಾತ್ಕಾಂಶೆಯ ಯೋಜನೆ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಮಾಡಿದ ಯೋಜನೆಯಾಗಿದೆ, ಮತ್ತು ಇದೆ ಸಂಘದಿಂದ ಮದ್ಯ ವರ್ಜನ ಶಿಬಿರಗಳನ್ನು ನಡೆಸಿ ಆನೇಕ ಬಡ ಕುಟುಂಬವು ನೆಮ್ಮದಿ ಕಾಣಲು ಸಾಧ್ಯವಾಯಿತು, ದಿನವಿಡೀ ಕುಡಿತದಿಂದ ಮನೆಯಲ್ಲಿ ಅಶಾಂತಿ ತಲೆದೂರಿತ್ತು, ಕೆಲವರು ಕುಡಿಯುವ ಚಟವನ್ನು ಬಿಟ್ಟು ಮನೆಯಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಯಿತು, ಅಲ್ಲದೆ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ದರು ಅ ಸಮಯದಲ್ಲಿ ತಾವು ಪ್ರತಿಭಟನೆ ಮಾಡಬೇಕಿತ್ತು ತಾವು ಅದನ್ನು ಮಾಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಧರ್ಮಸ್ಥಳ ಸಂಸ್ಥೆಯ ವತಿಯಿಂದ ಎಲ್ಲಾ ನೆರವು ಪಡೆದ ನೀವು ಗಳು ಈ ರೀತಿಯ ಆರೋಪ ಬಂದಾಗ ಅವರ ಜೊತೆಯಲ್ಲಿ ನಾವಿದ್ದೇವೆ ಎಂದು ತೋರಿಸಬೇಕಿತ್ತು ಎಂದು ತಿಳಿಸಿದರು.
ಕ್ಷೇತ್ರದ ಜಿಲ್ಲಾ ನಿರ್ದೇಶಕಿಯಾದ ಶ್ರೀಮತಿ ಲೀಲಾವತಿ ಮಾತನಾಡಿ ಗಾಂಧಿಯವರು ಸ್ವಾತಂತ್ರ ತರುವ ಸಂದರ್ಭದಲ್ಲಿ ನಾನು ಒಂದು ದಿನ ಪ್ರದಾನಿಯಾದರೆ ಮಾಡುವ ಮೊದಲ ಕೆಲಸವೇ ಮದ್ಯಪಾನ ನಿಷೇಧ ಎಂದು ಹೇಳಿದ್ದರು.
ಈ ಕ್ಷೇತ್ರದ ವತಿಯಿಂದ ಸುಮಾರು ನಲವತ್ತು ಸಂಘಗಳು ವಿವಿಧ ರೀತಿಯ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತದೆ ಅದರಲ್ಲಿ ಮದ್ಯವರ್ಜನ ಶಿಬಿರ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಜನ ಜಾಗ್ರತಿ ವೇದಿಕೆಯ ಅದ್ಯಕ್ಷರಾದ ಎ.ಟಿ.ರಂಗಸ್ವಾಮಿ ಮಾತನಾಡಿ ಡಾ: ವೀರೇಂದ್ರ ಹೆಗ್ಗಡೆಯವರು ಕೇವಲ ಹಿಂದೂ ಮಹಿಳೆಯರಿಗೆ ಮಾತ್ರ ಆರ್ಥಿಕ ಸಹಾಯ ಮಾಡುತ್ತಿಲ್ಲ ದೇಶದ ಎಲ್ಲ ಜಾತಿಯ ಮಹಿಳೆಯರಿಗೂ ಆರ್ಥಿಕ ವ್ಯವಸ್ಥೆ ಸಲ್ಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ವು ಹುನ್ನಾರ ಮಾಡಿ ಧರ್ಮಸ್ಥಳ ದ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಾಗದೆ ಎಸ್ ಐ ಟಿ ತನಿಖೆ ನಡೆಸಿ ಧರ್ಮಸ್ಥಳ ವನ್ನು ತಮ್ಮ ವಶಕ್ಕೆ ಪಡೆಯಬೇಕು ಎಂದು ಹೆಗಡೆ ಕುಟುಂಬದ ಸದಸ್ಯರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ನಂತರ ತನಿಖೆ ಮುಗಿದ ನಂತರ ಹೆಗಡೆ ಕುಟುಂಬಕ್ಕೆ ಕ್ಷಮೆ ಯಾಚಿಸಿತ್ತು..
ಇನ್ನೂ ಮುಂದೆ ಯಾವ ಸರ್ಕಾರವೇ ಆಗಲಿ ಧರ್ಮಸ್ಥಳ ದ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿ ದ ಸಹಿಸಲು ಸಾದ್ಯವಿಲ್ಲ ಎಂದು ತಿಳಿಸಿದರು.
ಸರ್ಕಾರಕ್ಕೆ ಧರ್ಮಸ್ಥಳ ಸಂಘದ ವತಿಯಿಂದ ಮದ್ಯ ಮುಕ್ತ ರಾಜ್ಯವನ್ನಾಗಿ ಮಾಡಲು ಠರಾವು ನೀಡಿದರು. ಅದರ ಅಂಶಗಳನ್ನು ಪಾರ್ಥ ಚಿನ್ನಪ್ಪ ಓದಿದರು.
ಬಾನಂಗಡ ಅರುಣ, ಮಾತನಾಡಿ ಸಂಸ್ಥೆಗಳು ಮಾಡುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸತೀಶ್ ಹೊನ್ನವಳ್ಳಿ, ವೈದ್ಯರಾದ ವಿಶ್ವನಾಥ ಸಿಂಪಿ, ಧನಂಜಯ, ಪಟ್ರಪಂಡ ಗೀತಾ ಸೇರಿದಂತೆ ಅನೇಕ ಮಂದಿ ಭಾಗವಹಿಸಿದ್ದರು..
ವರದಿ: ರವಿ ಕುಮಾರ್