ಮಡಿಕೇರಿ.
ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಪೇಡರೆಶನ್ ನ ರಾಷ್ಟ್ರೀಯ ಅದ್ಯಕ್ಷರಾದ ಸನ್ಮಾನ್ಯ ಶ್ರೀ ಸ್ವಾಮಿನಾಥ ಜೈಸ್ವಾಲ್ ಅವರ ಅನುಮೋದನೆಯ ಮೇರೆಗೆ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೇಡರೆಶನ್ ನ ರಾಜ್ಯದ್ಯಕ್ಷರಾದ ಶ್ರೀ ನಂದ.ಎನ್ ಅವರ ಶಿಫಾರಸ್ಸಿನಂತೆ ಆದೇಶದ ಮೇರೆಗೆ ಶ್ರೀ ಗಣೇಶ್ ನಾಯ್ಡು ಅವರನ್ನು ತಕ್ಷಣ ಜಾರಿಗೆ ಬರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಜ್ದೂರ್ ಪೇಡರೆಶನ್ ನ ಕಾರ್ಯದ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಗಣೇಶ್ ನಾಯ್ಡು ಮಾತನಾಡಿ ಕೂಡಲೇ ಅಧಿಕಾರ ವಹಿಸಿಕೊಂಡು ಕರ್ನಾಟಕ ರಾಜ್ಯ ಕಾರ್ಯದ್ಯಕ್ಷರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಜ್ದೂರ್ ಪೇಡರೆಶನ್ ನ (INTUC) ನ್ನು ರಚಿಸಿ ಮಹಿಳೆಯರು, ಹಿಂದುಳಿದ ವರ್ಗ, ದಲಿತರು, ಅಲ್ಪಸಂಖ್ಯಾತರು, ಸೇರಿದಂತೆ ಸದಸ್ಯರನ್ನು ಹೆಚ್ಚಿನ ಸಂಖ್ಯೆಯನ್ನು ನೋಂದಾಯಿಸಿಕೊಂಡು ಪಕ್ಷ ಸಂಘಟನೆ ಮಾಡುವಂತೆ ಆದೇಶ ನೀಡಲಾಗಿದೆ ಎಂದರು.
ಪಕ್ಷದ ಮುಖಂಡರ ಮಾರ್ಗದರ್ಶನ ಹಾಗೂ ಸ್ಥಳೀಯ ನಾಯಕರ ಸಹಕಾರದೊಂದಿಗೆ ತಮಗೆ ನೀಡಲಾಗಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವೆ ಎಂದರು.
ಈ ದಿಸೆಯಲ್ಲಿ ತಮಗೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ಶ್ರೀ ನಂದ ಎಸ್. ರಾಷ್ಟ್ರೀಯ ಅದ್ಯಕ್ಷರು ಸೋಶಿಯಲ್ ಮೀಡಿಯಾ ಮತ್ತು ಐ ಟಿ ಸೆಲ್ ರಾಜ್ಯದ್ಯಕ್ಷರು ಕರ್ನಾಟಕ ಇವರು ಮಾಹಿತಿ ನೀಡಿದ್ದಾರೆ.