ವಿರಾಜಪೇಟೆ.
ವಿರಾಜಪೇಟೆ ಪಟ್ಟಣದ ಮಲೆತಿರಿಕೆ ಬೆಟ್ಟ ಪ್ರದೇಶ ವಾಸಕ್ಕೆ ಯೋಗ್ಯವಿಲ್ಲಾವೆಂಬ ಭೂ ವಿಜ್ಞಾನಿಗಳ ವರದಿ ಆದಾರದಲ್ಲಿ ಅಲ್ಲಿನ ನಿವಾಸಿಗಳಿಗೆ ಈ ಹಿಂದೆ ಅಂಬಟ್ಟಿ ಗ್ರಾಮದಲ್ಲಿ ಸರಕಾರ ವಸತಿ ಉದ್ದೇಶಕ್ಕೆ ಹಣ ನೀಡಿ ಜಾಗ ಖರೀದಿ ಮಾಡಿತ್ತು.
ಇದೀಗ ಬೆಟ್ಟ ಪ್ರದೇಶದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ವ್ಯೂಪಾಯಿಂಟ್ ಕಾಮಗಾರಿಗೆ ಸರಕಾರಕ್ಕೆ ಅಲ್ಲಿನ ಜಾಗದ ಸರ್ವೇ ನಂಬರ್, ಬ್ಲಾಕ್, ಗ್ರಾಮವನ್ನು ಮರೆ ಮಾಚಿ, ಕಂದಾಯ ಮತ್ತು ಅರಣ್ಯ ಇಲಾಖೆಗೆ ಸೇರಿದ ಕೆಲವು ಭಾಗದಲ್ಲಿ ಕಾಮಗಾರಿ ನಡೆಸಲು ಸರಕಾರದ ಅನುಮೋದನೆ ಪಡೆದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಎಸ್ ಕಾಳಾಯ್ಯ ಆರೋಪಿಸಿದ್ದಾರೆ
ಬೆಟ್ಟಕ್ಕೆ ಅಪಾಯವಾಗಿ ಜೀವ ಹಾನಿಯಾಗುವ ಸಂಭವವಿದೆಯೆಂದು ಸರಕಾರಕ್ಕೆ ವಾಸ್ತವವನ್ನು ಉದ್ದೇಶ ಪೂರ್ವಕವಾಗಿ ತಪ್ಪು ಮಾಹಿತಿ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸದರಿ ವ್ಯೂಪಾಯಿಂಟ್ ಕಾಮಗಾರಿಯನ್ನು ಬೇರೆ ಸೂಕ್ತ ಸ್ಥಳ ದಲ್ಲಿ ಮಾಡಿ ಮಲೆತಿರಿಕೆ ಬೆಟ್ಟವನ್ನು ಸಂರಕ್ಷಣೆ ಮಾಡುವಂತೆ ಜಿಲ್ಲಾಧಿಕಾರಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ಎಂ.ಎಸ್ ಕಾಳಾಯ್ಯ ಇಂದು ದೂರು ಸಲ್ಲಿಸಿದ್ದಾರೆ.
ದಕ್ಷಿಣ ಕೊಡಗಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ, ಶಾಸಕರು ಈ ಹಿಂದೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಶಾಸಕರ ಶಿಫಾರಸಿನ ಅನ್ವಯ ಸರ್ಕಾರ ಈ ಯೋಜನೆಗೆ ಹಣವನ್ನು ಕೂಡ ಮಂಜೂರು ಮಾಡಿತ್ತು. ಇದೀಗ ಅಪಸ್ವರ ಎದಿದ್ದು, ಮಡಿಕೇರಿಯ ರಾಜ ಸೀಟಿನಲ್ಲಿ ಉದ್ದೇಶಿಸಿದ್ದ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ತಡೆಯಾದಂತೆ ಇದೀಗ ವಿರಾಜಪೇಟೆ ವ್ಯೂ ಪಾಯಿಂಟ್ ಗೂ ಕೂಡ ತಡೆಯವಾಗುವ ಸಂಭವವಿದೆ ಎಂದು ಹೇಳಲಾಗಿದೆ.
ಇದೇ ಸ್ಥಳದಲ್ಲಿ ಹಿಂದೆ ಶಾಸಕ ಕೆ.ಜಿ.ಬೋಪಯ್ಯ ನವರ ಅವಧಿಯಲ್ಲಿ ರೋಪ್ ವೇ ನಿರ್ಮಾಣಕ್ಕೆ ಯೋಜನೆ ರೂಪಿಸಿ ನಂತರ ಅದು ಕೈ ಬಿಡಲಾಗಿತ್ತು.