ವಿರಾಜಪೇಟೆ.
ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ಸ್ವಚ್ಚತಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ಇಂದು ಬೆಳಗ್ಗೆ ಪುರಸಭೆ ಸದಸ್ಯರು, ಪೌರ ಕಾರ್ಮಿಕರು, ವಿವಿಧ ಕಾಲೇಜಿನಲ್ಲಿ ವಿದ್ಯಾರ್ಥಿಗಳು,ಸಮಾಜ ಸೇವಕರು ಸೇರಿದಂತೆ ಮೂನ್ನರಕ್ಕೂ ಹೆಚ್ಚು ಮಂದಿ ವಿರಾಜಪೇಟೆ ಗೋಣಿಕೊಪ್ಪ ರಸ್ತೆಯ ಕಾವೇರಿ ಕಾಲೇಜಿನಿಂದ ಪಂಜರ ಪೇಟೆ ಸರ್ಕಾರಿ ಬಸ್ ನಿಲ್ದಾಣ ಸೇರಿದಂತೆ ಅನೇಕ ಕಡೆಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಪುರಸಭೆ ಅದ್ಯಕ್ಷರಾದ ಎಂ ಕೆ ದೇಚಮ್ಮ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ರಂಜಿಪೂಣಚ್ಚ,ಎಸ್ ಎಚ್ ಮತೀನ್ ಅಗಸ್ಟೀನ್ ಬೆನ್ನಿ,ಸುನಿತಾ ಜೂನ,ಮಹಮ್ಮದ್ ರಾಫಿ,ಹಾಗೂ ಪುರಸಭೆ ನಾಮ ನಿರ್ದೇಶನ ಸದಸ್ಯರಾದ ಅತೀಪ್ ಮನ್ನ,ದೀನೆಶ್,ಸಾಹುಲ್ ಹಮೀದ್,ಸಿ.ಬಿ.ರವಿ. ಸುನಿತಾ,ಸೇರಿದಂತೆ ಸಮಾಜ ಸೇವಕ ರಾದ ಜಗದೀಶ್, ಜಗತ್,ಪುರಸಭೆ ಮುಖ್ಯಾಧಿಕಾರಿ ನಾಚಪ್ಪ,ಪುರಸಭೆ ಕಛೇರಿಯ ಸಿಬ್ಬಂದಿ ಗಳು ಪೌರ ಕಾರ್ಮಿಕರು. ವಿರಾಜಪೇಟೆ ಡೊನೆಟರ್ಸ್ ಚಾರಿಟೇಬಲ್ ಟ್ರಸ್ಟ್ ಕಾರ್ಯಕ್ರಮ ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ಶ್ರಮ ದಾನ ಮಾಡಿದರು.