ಮಡಿಕೇರಿ . ಜೂನ್ 3 ರಂದು ನೂತನ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಪದಗ್ರಹಣವಾಗುತ್ತಿದ್ದು ಈ ಬಾರಿಯ ನೂತನ ಸಚಿವರ ಆಯ್ಕೆಯಲ್ಲಿ ಕೊಡಗು ಜಿಲ್ಲೆಯ ಯಂಗ್ ಆಂಡ್ ಎನರ್ಜಿ ಶಾಸಕರಾದ ಸನ್ಮಾನ್ಯ ಶ್ರೀ ಡಾ. ಮಂಥರ್ ಗೌಡರವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೊಡಗು ಜಿಲ್ಲಾ ಒಕ್ಕಲಿಗಗೌಡ ಯುವ ವೇದಿಕೆ ಆಗ್ರಹಿಸುತ್ತಿದೆ.
ಇಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ರಾಜ್ಯದ ರಾಜಕೀಯ ಬೆಳವಣಿಗೆ ಉಲ್ಲೇಖಿಸಿ ಮಾತನಾಡಿದ ಉಪಾಧ್ಯಕ್ಷರಾದ ವಿ.ಪಿ ಲೋಹಿತ್ ಗೌಡ ಕೊಡಗು ಜಿಲ್ಲೆಗೆ ಸೂಕ್ತಸ್ಥಾನಮಾನ ಸಿಗಬೇಕು ಡಾ. ಮಂಥರ್ ಗೌಡರಿಗೆ ಸಚಿವ ಸ್ಥಾನ ನೀಡಲಿ ಎಂದು ಸಮುದಾಯದ ಪರವಾಗಿ ಮನವಿ ಮಾಡಿದರು.
ವೇದಿಕೆಯ ಉಪಾಧ್ಯಕ್ಷರಾದ ವಿ. ಪಿ ಲೋಹಿತ್ ಗೌಡ ಮಾತನಾಡಿ ಕೊಡಗು ಕಾಂಗ್ರೆಸ್ಸಿಗೆ ಹೊಸ ಚೈತನ್ಯ ನೀಡಿದವರು ಡಾ. ಮಂಥರ್ ಗೌಡ ರವರು. ಕೊಡಗಿನಲ್ಲಿ ಕಾಂಗ್ರೆಸ್ ಕಳೆದ 25 ವರ್ಷಗಳಿಂದ ಅಸ್ಥಿತ್ವಕ್ಕೆ ಒದ್ದಾಡುತ್ತಿದ್ದಾಗ ಆಸರೆಯಾಗಿದೇ ಮಂಥರ್ ಗೌಡ, ವಿಧಾನ ಪರಿಷತ್ ಗೆಲ್ಲಲ್ಲೂ ಸಾಧ್ಯವೇ ಇಲ್ಲ ಎಂದು ಗೊತ್ತಿದ್ದರೂ ಜಿಲ್ಲೆಯಲ್ಲಿ ಅಭ್ಯರ್ಥಿಗಳಾಗಲೂ ಯಾರೂ ಸಿದ್ದರಿಲ್ಲದ ಸಂದರ್ಭದಲ್ಲಿ ಕೊಡಗಿಗೆ ಬಂದು ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ನೀಡಿದ್ದು ಇದೇ ಮಂಥರ್ ಗೌಡರು, ಅವರ ಆಗಮನದ ನಂತರ ಕೊಡಗು ಕಾಂಗ್ರೆಸ್ಸಿನಲ್ಲಿ ಸಂಚಲನ ಮೂಡಿಸಿದರು ನಂತರ ನಡೆದೆದೆಲ್ಲಾ ಇತಿಹಾಸ ಇಂತ ಯುವ ನಾಯಕರ ಛಲ, ಹೋರಾಟ, ಜನರೊಂದಿಗಿನ ಬಾಂಧವ್ಯ, ಚಾಣಕ್ಷತನ ನಡೆ ಕೊಡಗಿನಲ್ಲಿ ಕಾಂಗ್ರೆಸ್ ಮತ್ತೆ ನೆಲೆ ಊರಿದೆ ಹಾಗಾಗಿ ನೂತನ ಸಚಿವ ಸಂಪುಟದಲ್ಲಿ ಕೊಡಗಿಗೆ ಪ್ರಾತಿನಿಧ್ಯ ನೀಡಬೇಕು ಮಡಿಕೇರಿಯ ಮಾನ್ಯ ಶಾಸಕರಾದ ಮಂಥರ್ ಗೌಡರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸುತ್ತೇವೆ ಎಂದು ಪತ್ರಿಕಾ ಹೇಳಿಕೆ ನೀಡಿದರು.