One Tap News - Kannada News Daily

Header
collapse
...
Home / State News / ಮಡಿಕೇರಿಯ ಕಾಟಕೇರಿ ಬಳಿ ಗುರುಕುಲ ಮಾದರಿಯ ವಸತಿ ಶಾಲೆಗೆ ಆಕಸ್ಮಿಕ ಬೆಂಕಿ ಓರ್ವ ವಿದ್ಯಾರ್ಥಿ ಬೆಂಕಿಗೆ ಆಹುತಿ

ಮಡಿಕೇರಿಯ ಕಾಟಕೇರಿ ಬಳಿ ಗುರುಕುಲ ಮಾದರಿಯ ವಸತಿ ಶಾಲೆಗೆ ಆಕಸ್ಮಿಕ ಬೆಂಕಿ ಓರ್ವ ವಿದ್ಯಾರ್ಥಿ ಬೆಂಕಿಗೆ ಆಹುತಿ

2025-10-09  Kodagu Desk  11 views
ಮಡಿಕೇರಿಯ ಕಾಟಕೇರಿ ಬಳಿ ಗುರುಕುಲ ಮಾದರಿಯ ವಸತಿ ಶಾಲೆಗೆ ಆಕಸ್ಮಿಕ ಬೆಂಕಿ  ಓರ್ವ ವಿದ್ಯಾರ್ಥಿ ಬೆಂಕಿಗೆ ಆಹುತಿ

ಮಡಿಕೇರಿ. 

ಮಡಿಕೇರಿ ಸಮೀಪದ ಕಾಟಕೇರಿ ಹರಿ ಮಂದಿರ್ ವಸತಿ ಶಾಲೆಗೆ ಆಕಸ್ಮಿಕ ಬೆಂಕಿ ತಗುಲಿ ಶಾಲೆಯ ಮೇಲ್ಚಾವಣಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಈ ವಿದ್ಯಾರ್ಥಿ ನಿಲಯದಲ್ಲಿದ್ದ ಒಟ್ಟು  29 ವಿದ್ಯಾರ್ಥಿಗಳು ಸುರಕ್ಷಿತವಾಗಿ ಹೊರ ಬಂದಿದ್ದು ಓರ್ವ ಎರಡನೇ ಕ್ಲಾಸಿನ ಪುಷ್ಪಕ್ ಎಂಬಾತನು ಬೆಂಕಿಗೆ ಆಹುತಿಯಾಗಿದ್ದಾನೆ ಎಂದು ಹೇಳಲಾಗಿದೆ.

 ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ  ಪ್ರಯತ್ನಿಸಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ  ನಿರೀಕ್ಷಕರಾದ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಗುರುಕುಲ ಮಾದರಿಯಲ್ಲಿ ಉಚಿತವಾಗಿ ಈ ಆಶ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ  ಶಿಕ್ಷಣ ನೀಡುತ್ತಿದ್ದು,  ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿದ್ದರಿಂದ  ಈ ಆಶ್ರಮ ಶಾಲೆಗೆ ಒಳ್ಳೆಯ ಹೆಸರಿತ್ತು.


Share: