ಮೈಸೂರು.
ಈ ಬಾರಿಯ ಧ್ವನಿ ಕೊಟ್ಟ ಧಣಿ, ಪ್ರತಿಷ್ಠಿತ ಪ್ರಶಸ್ತಿಗೆ ಕೊಡಗು ಮೂಲದ, ಪ್ರಸ್ತುತ ಮೈಸೂರು ವೃತ್ತ ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕರಾದ ಐತಿಚಂಡ ರಮೇಶ್ ಉತ್ತಪ್ಪ ಸೇರಿದಂತೆ ನಾಲ್ವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಾಸನ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ವಿ. ಮಂಜುನಾಥ್, ವೈದ್ಯ ವಾರ್ತಾ ಪ್ರಕಾಶನದ ನಿರ್ದೇಶಕರಾದ ಶ್ರೀನಿವಾಸ್ ಬಹುದೂರ್, ಹಾಗೂ ಸಾಹಿತಿಗಳು, ಮಂಗಳೂರಿನ ಜಾನವಿ ಸೀತಾ ಲಕ್ಷ್ಮಿ ವರ್ಮಾ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ಮೈಸೂರಿನ ಅರಸು ಜಾಗೃತಿ ಅಕಾಡೆಮಿ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಅಕ್ಟೋಬರ್ 11ರಂದು ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ: ಡಿ. ತಿಮ್ಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರಿ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ಶಾಸಕ ತನ್ವೀರ್ ಶೇಟ್, ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಚುಟುಕು ಯುಗಾಚಾರ್ಯ ಎಂ.ಜಿ.ಆರ್ ಅರಸ್ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ.