One Tap News - Kannada News Daily

Header
collapse
...
Home / Mysore / ಆದಿವಾಸಿ ಆಶ್ರಮ ಶಾಲೆಯ ಮಕ್ಕಳಿಗೆ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ದಂತ ಆರೋಗ್ಯ ತಪಾಸಣೆ.

ಆದಿವಾಸಿ ಆಶ್ರಮ ಶಾಲೆಯ ಮಕ್ಕಳಿಗೆ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ದಂತ ಆರೋಗ್ಯ ತಪಾಸಣೆ.

2025-12-06  Mysore Desk  52 views
ಆದಿವಾಸಿ ಆಶ್ರಮ ಶಾಲೆಯ ಮಕ್ಕಳಿಗೆ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ದಂತ ಆರೋಗ್ಯ ತಪಾಸಣೆ.

ಹುಣಸೂರು.

ಹುಣಸೂರು ತಾಲ್ಲೂಕಿನ ವೀರನ ಹೊಸಹಳ್ಳಿ ಸರ್ಕಾರಿ ಆದಿವಾಸಿ ಆಶ್ರಮ ಶಾಲೆಯ ಆವರಣದಲ್ಲಿ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 600ಮಕ್ಕಳಿಗೆ ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ದಂತ ಆರೋಗ್ಯ ತಪಾಸಣೆ ನಡೆಸಿ ಸ್ವಚ್ಛತೆ ಕುರಿತು ಮಾಹಿತಿ ನೀಡಿ ಚಳಿಗಾಲಕ್ಕೆ ಅನುಕೂಲವಾಗುವಂತೆ ಸ್ವೆಟ್ಟರ್ಗಳನ್ನು ವಿತರಿಸಿ, ಟೂತ್ ಪೇಸ್ಟ್, ಬ್ರಶ್, ಹಾರ್ಲಿಕ್ಸ್, ಬೂಸ್ಟ್, ಚಾಕಲೆಟ್ ನೀಡಲಾಯಿತು. 

1001921059.jpg

ಹೆಮ್ಮಿಗೆ, ನೇರಳಕುಪ್ಪೆ,   ಕೊಳವಿಗೆ, ಭರತವಾಡಿ, ವಿಜಯಗಿರಿ, ತೆಕ್ಲ ಹಾಡಿ, ಕೊಟ್ಟಿಗೆ ಕಾವಲ್, ವೀರನ ಹೊಸಹಳ್ಳಿ ಶಾಲೆಗಳಲ್ಲಿ ಕಲಿಯುವ ಮಕ್ಕಳು, ಶಿಕ್ಷಕರು, ಮುಖಂಡರು ಪಾಲ್ಗೊಂಡಿದ್ದರು. 

1001921051.jpg

ಡೀಡ್ ಸಂಸ್ಥೆ ಬೆಂಗಳೂರಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಹೆಲ್ತ್ ಅಂಡ್ ಎಜುಕೇಶನ್  ಫೌಂಡೇಶನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹುಣಸೂರು ಇವರ ಸಹಕಾರದಿಂದ ಬೆಂಗಳೂರಿನ ಮಹಿಳಾ ಸಬಲೀಕರಣ ಕಾರ್ಯದಲ್ಲಿ ತೊಡಗಿರುವ ವೀ ಕಮ್ಯೂನಿಟಿ ಸಂಸ್ಥೆ, ಸ್ವೆಟ್ಟರ್ ನೀಡಿದರೆ,    ಡಿ. ಎ ಪಾಂಡು ಮೆಮೋರಿಯಲ್ ಆರ್ ವಿ ಡೆಂಟಲ್ ಕಾಲೇಜು ವೈದ್ಯರು ಡಾ. ಸುಧೀರ್ ತಂಡ ಮಕ್ಕಳ ದಂತ ಪರೀಕ್ಷೆ ನಡೆಸಿದರು. 

1001921052.jpg

ಯೂನಿಲಿವರ್ ಕಂಪನಿ ಯವರು ಮಕ್ಕಳಿಗೆ ಸ್ವಚ್ಛತಾ ಸಾಮಗ್ರಿಗಳು, ತಿನಿಸುಗಳನ್ನು ನೀಡಿದರು. ಡಾ. ಬಿ ಆರ್ ಅಂಬೇಡ್ಕರ್ ಫೌಂಡೇಶನ್ ಅಧ್ಯಕ್ಷ ಡಾ ಆನಂದ್ ತಂಡ, ವೀ ಕಮ್ಯುನಿಟಿ ಶೈಲಜಾ ವೆಂಕಟ್ ತಂಡ, ಯೂನಿಲಿವರ್ ಕಂಪನಿಯ ಆಶಾ ರವರ ತಂಡ, ಡೀಡ್  ಕಾರ್ಯ ಕರ್ತರು, ಆದಿವಾಸಿ ಮುಖಂಡರಾದ ಹರ್ಷ, ವಿಠಲ್, ಲಕ್ಷ್ಮಿ, ಜಯಪ್ಪ, ಶಿವಣ್ಣ, ಕಲ್ಲೂರಯ್ಯ, ಶಾಲೆಗಳ ಉಪಾಧ್ಯಯರ ತಂಡ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ.. ಶ್ರೀಕಾಂತ್, ಹುಣಸೂರು


Share: