ಹುಣಸೂರು.
ಇಂದು ಹುಣಸೂರು ತಾಲೂಕು ಕಟ್ಟೆಮಳವಾಡಿ ಮಾರುಕಟ್ಟೆಯಲ್ಲಿ ತಂಬಾಕು ಬೆಳೆಗಾರರ ಸಭೆಯನ್ನು ಕರೆಯಲಾಯಿತು.
ಕಳೆದ ತಿಂಗಳು ಕಗ್ಗುಂಡಿ ಮಾರುಕಟ್ಟೆಯಲ್ಲಿ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕರ್ನಾಟಕದ ತಂಬಾಕಿಗೆ ಉತ್ತಮವಾದ ಬೆಲೆ ಸಿಗದ ಕಾರಣ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಮೈಸೂರು ಮತ್ತು ಕೊಡಗು ಜಿಲ್ಲೆಯ ಸಂಸತ್ ಸದಸ್ಯರಾದ ಯದುವೀರ್ ಕೃಷ್ಣರಾಜ ಒಡೆಯರ್ ಮತ್ತು ತಂಬಾಕು ಮಂಡಳಿಯ ನಿರ್ದೇಶಕರಾದ ಶ್ರೀನಿವಾಸ್ ಮಂಡಳಿಯ ಅಧಿಕಾರಿಗಳು ಹಾಗೂ ರೈತ ಸಂಘದ ರಾಜ್ಯ ಅಧ್ಯಕ್ಷರು ಬಡಗಲಪುರ ನಾಗೇಂದ್ರ ಅವರು ಎಲ್ಲಾ ಪ್ಲಾಟ್ಫಾರಂನ ರೈತ ಮುಖಂಡರುಗಳು ಭಾಗವಹಿಸಿ ಚರ್ಚಿಸಿ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಕೊಡುವುದಾಗಿ ಭರವಸೆ ನೀಡಿದ್ದರು.
ಆದರೆ ಇಲ್ಲಿಯವರೆಗೆ ಉತ್ತಮ ಬೆಲೆ ಸಿಗದ ಕಾರಣ ಎಲ್ಲಾ ಪ್ಲಾಟ್ಫಾರಂ ನ ಮುಖಂಡರುಗಳು ಹಾಗೂ ನೂತನ ಕ್ರಾಪ್ ಸದಸ್ಯರುಗಳು ಸೇರಿ ಚರ್ಚಿಸಿ ತಂಬಾಕಿಗೆ, ಉತ್ತಮ ಬೆಲೆ ಸಿಗಲು ಹೋರಾಟವನ್ನು ರೂಪಿಸಲು ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಣಯ ಪತ್ರವನ್ನು ಮೈಸೂರು ಪ್ರಾದೇಶಿಕ ವ್ಯವಸ್ಥಾಪಕರಾದ ಮಾನ್ಯ ವೇಣುಗೋಪಾಲ್ ರವರ ಮೂಲಕ ಮಾನ್ಯ ನಿರ್ದೇಶಕರಿಗೆ ಹಾಗೂ ಇ.ಡಿ. ಯವರಿಗೆ ಮನವಿ ಪತ್ರಗಳನ್ನು ಸಲ್ಲಿಸಲಾಯಿತು.
ಇನ್ನು ದಿನಾಂಕ 25.12.2025ರ ಒಳಗಾಗಿ ತಂಬಾಕಿಗೆ ಉತ್ತಮವಾದ ಬೆಲೆ ಸಿಗದಿದ್ದರೆ 25 - 12- 2025 ರಿಂದ ರಿಂದ ಎಲ್ಲಾ ಮಾರುಕಟ್ಟೆಗಳನ್ನು ಬಂದ್ ಮಾಡಬೇಕೆಂದು ತಾಕಿತು ಮಾಡಲಾಯಿತು.
ಈ ಸಮಸ್ಯೆ ಬಗ್ಗೆ ಮೈಸೂರು ಮಂಡ್ಯ ಚಾಮರಾಜನಗರ ಹಾಸನ ಕ್ಷೇತ್ರದ ಸಂಸತ್ ಸದಸ್ಯರುಗಳು ರೈತರನ್ನು ಡೆಲ್ಲಿಗೆ ನಿಯೋಗವನ್ನು ಕರೆಯಿಸಿಕೊಂಡು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಉತ್ತಮ ಬೆಲೆ ಕೊಡಿಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಿ ಕರ್ನಾಟಕ ತಂಬಾಕು ಬೆಳೆಗಾರರಿಗೆ ಉತ್ತಮ ಬೆಲೆ ಕೊಡಿಸಲು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ತಂಬಾಕು ಬೆಳೆಗಾರರ ನಿಯೋಗವನ್ನು ಕರೆಸಿಕೊಂಡು ಚರ್ಚಿಸಿದ ಪಕ್ಷದಲ್ಲಿ ದಿನಾಂಕ 26.12.2025 ರ ದಿನದಿಂದ ನಾಲ್ಕು ಜಿಲ್ಲೆಯ ಎಂ. ಪಿ. ಗಳ ಕಚೇರಿಗಳ ಮುಂದೆ ನ್ಯಾಯಕ್ಕಾಗಿ ರೈತರ ತಂಬಾಕು ಬೆಳೆಗಾರರ ರಕ್ಷಣೆಗಾಗಿ ಧರಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಭೆಯು ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಹೊಸೂರ್ ಕುಮಾರ್, ಮೊತ್ತ ಬಸವರಾಜು, ಮೊದೂರು ಶಿವಣ್ಣ, ಉಂಡವಾಡಿ ಚಂದ್ರೇಗೌಡ, ಕಟ್ಟೆ ಮಳಲವಾಡಿ ಅಶೋಕ, ಶ್ರೀಧರ ರೈತ ಸಂಘದ ಅಧ್ಯಕ್ಷರಾದ ಬೆಂಕಿಪುರ ಚಿಕ್ಕಣ್ಣ, ಮಹಾದೇವು ಅಗ್ರಹಾರ ರಾಮೇಗೌಡ, ಸತೀಶ್ ಪ್ರಕಾಶ್ ರಾಜೆ ಅರಸ್, ಅತ್ತಿಕುಪ್ಪೆ ರಾಮಕೃಷ್ಣ, ಶಿರೂರು ಬಸವರಾಜೇಗೌಡ ಪಿರಿಯಾಪಟ್ಟಣ ಚೆಲುವಯ್ಯ ಬೀಜಗನಹಳ್ಳಿ ನಾಗರಾಜಪ್ಪ ನೂತನ ಕ್ರಾಪ್ ಸದಸ್ಯರುಗಳಾದ ನಿಲುವಾಗಿಲು ಪ್ರಭಾಕರ್ ಸೋಮಶೇಖರ್ ಮಹೇಂದ್ರ ನಿಂಗೇಗೌಡ ಕರುಣಾಕರ ಇನ್ನು ಇತರ ರೈತ ಮುಖಂಡರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.