One Tap News - Kannada News Daily

Header
collapse
...
Home / Mysore / ನಾಗರಿಕತೆಯ ಭರಾಟೆಯಲ್ಲಿ ನಮ್ಮ ಧಾರ್ಮಿಕ ನಂಬಿಕೆಗಳು, ಸಂಸ್ಕಾರ, ಸಂಸ್ಕೃತಿ ನಶಿಸಿಹೋಗುತ್ತಿದ್ದು, ದೇವಾಲಯಗಳನ್ನು ವ್ಯವಸ್ಥಿತ ರೀತಿಯಲ್ಲಿ ನೋಡಿಕೊಳ್ಳಬೇಕು’ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮಿಜಿ

ನಾಗರಿಕತೆಯ ಭರಾಟೆಯಲ್ಲಿ ನಮ್ಮ ಧಾರ್ಮಿಕ ನಂಬಿಕೆಗಳು, ಸಂಸ್ಕಾರ, ಸಂಸ್ಕೃತಿ ನಶಿಸಿಹೋಗುತ್ತಿದ್ದು, ದೇವಾಲಯಗಳನ್ನು ವ್ಯವಸ್ಥಿತ ರೀತಿಯಲ್ಲಿ ನೋಡಿಕೊಳ್ಳಬೇಕು’ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮಿಜಿ

2025-12-01  Mysore Desk  112 views
ನಾಗರಿಕತೆಯ ಭರಾಟೆಯಲ್ಲಿ ನಮ್ಮ ಧಾರ್ಮಿಕ ನಂಬಿಕೆಗಳು, ಸಂಸ್ಕಾರ, ಸಂಸ್ಕೃತಿ ನಶಿಸಿಹೋಗುತ್ತಿದ್ದು, ದೇವಾಲಯಗಳನ್ನು ವ್ಯವಸ್ಥಿತ ರೀತಿಯಲ್ಲಿ ನೋಡಿಕೊಳ್ಳಬೇಕು’   ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮಿಜಿ

ಹುಣಸೂರು. 

ಹುಣಸೂರು ತಾಲ್ಲೂಕಿನ ಕಿರಂಗೂರುವಿನಲ್ಲಿ ನಿರ್ಮಿಸಿರುವ ಭೈರವೇಶ್ವರ  ದೇವಸ್ಥಾನದ ಲೋಕಾರ್ಪಣೆ  ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮಿಜಿ ಮಾತನಾಡಿ 

ಹಳ್ಳಿಗಳು ‘ದೇವಸ್ಥಾನಗಳು ಭಕ್ತಿ ಭಾವ, ಸಂಸ್ಕೃತಿಗಳ ನೆಲೆಯಾಗಿದ್ದು, ದೇವರ ಆರಾಧನೆಯಿಂದ ನಮಗೆ ಒಳಿತಾಗುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದರು. 

ನಾಗರಿಕತೆಯ ಭರಾಟೆಯಲ್ಲಿ ನಮ್ಮ ಧಾರ್ಮಿಕ ನಂಬಿಕೆಗಳು, ಸಂಸ್ಕಾರ, ಸಂಸ್ಕೃತಿ ನಶಿಸಿಹೋಗುತ್ತಿದ್ದು, ದೇವಾಲಯಗಳನ್ನು ವ್ಯವಸ್ಥಿತ ರೀತಿಯಲ್ಲಿ ನೋಡಿಕೊಳ್ಳಬೇಕು’ ಎಂದರು.

ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ. ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಪ್ರತಿಯೊಬ್ಬರು ಮನಗಾಣಬೇಕು’ ಎಂದರು.

 ದೇಹ ಅಶುದ್ಧವಾದರೆ ಸ್ನಾನ ಮಾಡಿ ಸ್ವಚ್ಛಗೊಳ್ಳುವಂತೆ ಮನಸ್ಸಿನ ಮಾಲಿನ್ಯವನ್ನು ತೊಡೆಯುವಲ್ಲಿ ದೇವಾಲಯಗಳ ಪಾತ್ರ ಮಹತ್ವದ್ದಾಗಿದೆ’ ಎಂದರು.

ಬದುಕಿನ ಜಂಜಾಟದಲ್ಲಿ ಮಲಿನಗೊಂಡ ಮನಸ್ಸನ್ನು ಶುದ್ಧಗೊಳಿಸಿ ಶಾಂತಿ, ನೆಮ್ಮದಿ ನೀಡಿ ಸಂತೈಸುವ ತಾಣ ದೇವಾಲಯಗಳಾಗಿವೆ, ದೇವಾಲಯಗಳು ನಮ್ಮ ಧಾರ್ಮಿಕ ಆಚರಣೆಯ ಕೇಂದ್ರಗಳಾಗಿವೆ’ ಎಂದರು.

ಮನುಷ್ಯನ ತನ್ನ ಜೀವಿತಾವಧಿಯಲ್ಲಿ ಗಳಿಸುವ ಮತ್ತು ಕಳೆದುಕೊಳ್ಳುವ ಯಾವುದೇ ಆಸ್ತಿ, ಹಣ ಅವನ ಬದುಕನ್ನು ಸಮಾಜಕ್ಕೆ ತೋರಿಸುವ ಕೆಲಸ ಮಾಡದು. ಬದಲಾಗಿ ಸಮಾಜಮುಖಿ ಚಿಂತನೆ, ಸ್ವಯಂಪ್ರೇರಿತವಾಗಿ ತೊಡಗುವ ಮಹಾನ್ ಕಾರ್ಯಗಳಲ್ಲಿ ನೆರವಾದವರಿಗೆ ದೇವರು ಹೆಚ್ಚಿನ ಶಕ್ತಿ ನೀಡುತ್ತಾನೆ’ ಎಂದರು.

 ಭಕ್ತರಿಗೆ ಅನ್ನಸಂರ್ಪಣೆ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಶ್ರೀನಿವಾಸ್, ಚಂದ್ರೇಗೌಡ, ಸ್ವಾಮಿಗೌಡ ಗ್ರಾ ಪಂ ಮಾಜಿ ಸದಸ್ಯ ಹೊಂಬೇಗೌಡ ಡೈರಿ ಅಧ್ಯಕ್ಷ ಮಂಜು ಪುಟ್ಟರಾಮೇಗೌಡ ಬಾಲು ಬೈರೇಗೌಡ ಮೋಹನ್ ಯಶೋಧರ್ ಜಗದೀಶ್ ಆನಂದ್ ಸಿದ್ದೇಗೌಡ ರಮೇಶ್ ಮಾದೇಗೌಡ ಸಚ್ಚಿನ್ ಸಾಗರ್ ಗೌತಮ್ ಹಾಜರಿದ್ದರು.


Share: