ಹುಣಸೂರು.
ಭಾನುವಾರ ನಡೆದ ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಚುನಾವಣೆಯಲ್ಲಿ ಪ್ರಗತಿಪರ ಸಂಘಟನೆಯ ಅಭ್ಯರ್ಥಿಯಾದ ಜಯಣ್ಣ ಕೆ.ಬಿ ರವರಿಗೆ ಮತ ನೀಡಿದ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸಿದ ರಾಜ್ಯ ರೈತ ಸಂಘ ಅಧ್ಯಕ್ಷ ಹೊಸೂರ್ ಕುಮಾರ್.
ಈ ಚುಣಾವಣೆಯಲ್ಲಿ ಶ್ರಮಿಸಿದ ರೈತ ಸಂಘದ ಎಲ್ಲಾ ಪದಾಧಿಕಾರಿಗಳು, ಪ್ರಗತಿಪರ ಸಂಘಟನೆಗಳ ಸ್ನೇಹಿತರು ಗೆಲುವಿಗಾಗಿ ಶ್ರಮಿಸಿದರೂ ಕೂಡ ಸಹಕಾರ ಕ್ಷೇತ್ರದಿಂದ ರೈತರಿಗೆ ಸಾರ್ವಜನಿಕರಿಗೆ ಸೇವೆ ಮಾಡಲು ಒಬ್ಬ ಹೋರಾಟಗಾರರನ್ನು ಪ್ರತಿನಿಧಿಯಾಗಿ ಸ್ಪರ್ಧಿಸಿ ಯಶಸ್ಸು ನೀಡದಿದ್ದರೂ ಕೂಡ ರೈತರ ಪರವಾಗಿ ನಿರಂತರವಾಗಿ ಶ್ರಮಿಸುತ್ತೇವೆಂದು ಈ ಮೂಲಕ ತಿಳಿಸಬಯಸುತ್ತೇವೆ.
ಆಯ್ಕೆಯಾದ ಪ್ರತಿನಿಧಿಗಳಿಗೆ ಶುಭವನ್ನು ಕೋರುತ್ತಾ ಮುಂದಿನ ದಿನಗಳಲ್ಲಿ ರೈತರ ಮತ್ತು ಸಾರ್ವಜನಿಕರಿಗೆ ಸಂಘದಿಂದ ಆಗಬೇಕಾದ ಉತ್ತಮ ಸೇವೆ ಮಾಡಲೆಂದು ಬಯಸುತ್ತೇವೆ.
ಈ ಪತ್ರಿಕಾ ಹೇಳಿಕೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್, ತಾಲ್ಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಲ್ಲಹಳ್ಳಿ ಜಯಣ್ಣ, ಡಿ.ಎಸ್ ಎಸ್ ಮುಖಂಡರಾದ ಅತ್ತಿಕುಪ್ಪೆ ರಾಮಕೃಷ್ಣ, ಚಿಕ್ಕಹುಣಸೂರು ರಾಜು, ಮೋದೂರು ಶಿವಣ್ಣ, ಉಂಡವಾಡಿ ಚಂದ್ರೇಗೌಡ, ವಿಷಕಂಠಪ್ಪ, ಕಲ್ಲಹಳ್ಳಿ ಶಿವಮೂರ್ತಿ, ಕಿರಿಜಾಜಿ ಧನಂಜಯ, ನಾಗೇಶ್ ಇನ್ನಿತರರು ಧನ್ಯವಾದಗಳನ್ನು ತಿಳಿಸಿದರು.